ಬೆಳ್ತಂಗಡಿಯಲ್ಲಿ ದಲಿತ ಯುವಕನ ಹತ್ಯೆ: ಬಜರಂಗ ದಳದ ಮುಖಂಡ ಕೃಷ್ಣ ಬಂಧನ

Prasthutha|

ಬೆಳ್ತಂಗಡಿ: ಕನ್ಯಾಡಿಯ ದಲಿತ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಜರಂಗದಳ ಕಾರ್ಯಕರ್ತ ಹಾಗೂ ಬಿಜೆಪಿ ಬೆಂಬಲಿಗ ಕಿಟ್ಟಿ ಅಲಿಯಾಸ್ ಕೃಷ್ಣನನ್ನು ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಬಳಿಯ ಕನ್ಯಾಡಿ ಗ್ರಾಮದ ಪರಶಿಷ್ಟ ಜಾತಿಗೆ ಸೇರಿದ ದಿನೇಶ್ (40) ಎಂಬ ಯುವಕನನ್ನು ಅದೇ ಗ್ರಾಮದ ಕೃಷ್ಣ ಎಂಬ ಬಜರಂಗದಳ ಮುಖಂಡ ಕೃಷ್ಣ ತೀವ್ರವಾಗಿ ಹಲ್ಲೆ ಮಾಡಿ ಹತ್ಯೆ ಮಾಡಿ ಪರಾರಿಯಾಗಿದ್ದ.

ಆತ ಹಲ್ಲೆ ಮಾಡುತ್ತಿರುವ ದೃಶ್ಯಗಳು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದವು. ಅದರಲ್ಲಿ ದಿನೇಶ್ ಎಂಬ ದಲಿತ ಯುವಕನನ್ನು ಬಜರಂಗದಳ ಮುಖಂಡ ಕೃಷ್ಣ ಎಳೆದಾಡಿ, ಥಳಿಸುವುದು ದಾಖಲಾಗಿದೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

ಬಜರಂಗದಳ ಮುಖಂಡನಿಂದ ಹತ್ಯೆಗೊಳಗಾದ ದಲಿತ ಯುವಕನಿಗೆ ನ್ಯಾಯ ಸಿಗಬೇಕು ಮತ್ತು ಆರೋಪಿ ಕೃಷ್ಣನನ್ನು ಬಂಧಿಸಬೇಕೆಂದು ಎಂದು ಒತ್ತಾಯಿಸಿ ಬೆಳ್ತಂಗಡಿಯಿಂದ ಧರ್ಮಸ್ಥಳದ ಕನ್ಯಾಡಿವರೆಗೆ ನಿನ್ನೆ ಕಾಂಗ್ರೆಸ್ ಜಾಥಾ ನಡೆಸಿತ್ತು.



Join Whatsapp