ರಷ್ಯಾ-ಉಕ್ರೇನ್ ಯುದ್ಧ; ಭಾರತಕ್ಕೆ ಕಾದಿದೆ ಭಾರೀ ಆರ್ಥಿಕ ಆಘಾತ

Prasthutha|

ಕೀವ್: ರಷ್ಯಾ   ಉಕ್ರೇನ್ ಯುದ್ಧದಿಂದಾಗಿ   ಇಡೀ ಜಗತ್ತಿಗೆ ಹೊಡೆತ ಬಿದ್ದಿದೆ. ಭಾರತ ಸೇರಿದಂತೆ ಹಲವು ದೇಶಗಳ ಆರ್ಥಿಕತೆಗೂ ದೊಡ್ಡ ಪೆಟ್ಟು ಬೀಳಲಿದ್ದು, ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಲಿದೆ ಎಂದು ವಿಶ್ವ ಹಾರ ಸಂಸ್ಥೆ ಹೇಳಿದೆ.

- Advertisement -

ಉಕ್ರೇನ್ ದೇಶವು ಜಗತ್ತಿನ ಪುಟ್ಟ ರಾಷ್ಟ್ರಗಳಲ್ಲಿ ಒಂದಾಗಿದ್ದರೂ ವಿವಿಧ ದೇಶಗಳಿಗೆ ಗೋದಿ, ಜೋಳ, ಸೂರ್ಯಕಾಂತಿ ಬೀಜ, ಬಾರ್ಲಿ, ಸಾಸಿವೆ  ಹಾಗೂ ಸೋಯಾಬೀನ್ ಗಳ ರಫ್ತಿನಲ್ಲಿ ಟಾಪ್ 10ನಲ್ಲಿದೆ.

ರಷ್ಯಾ ದಾಳಿಯಿಂದ ಉಕ್ರೇನ್ ನ ವಿದೇಶಿ ರಫ್ತು ಸಂಪೂರ್ಣ ಹದಗೆಟ್ಟಿದೆ. ಈಗಾಗಲೇ ಹಲವು ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಉಕ್ರೇನ್ನಿಂದ ರಫ್ತಾಗುತ್ತಿದ್ದ ಪದಾರ್ಥಗಳ ಬೆಲೆ ಗಗನಕ್ಕೇರುವುದರಲ್ಲಿ ಅನುಮಾನವಿಲ್ಲ ಎಂದು  ವರದಿಗಳು ತಿಳಿಸಿವೆ.

- Advertisement -

ಮುಖ್ಯವಾಗಿ ಸೂರ್ಯಕಾಂತಿ ಬೀಜ ಮತ್ತು ಸೂರ್ಯಕಾಂತಿ ಎಣ್ಣೆಗೆ ಭಾರತ ಉಕ್ರೇನ್ ದೇಶವನ್ನೇ ಅವಲಂಬಿಸಿದ್ದು, ಒಂದು ವರದಿಯ ಪ್ರಕಾರ ಶೆ.70ರಷ್ಟು ಸೂರ್ಯಕಾಂತಿ ಉತ್ಪನ್ನಗಳನ್ನು ಭಾರತಕ್ಕೆ ಉಕ್ರೇನ್ ನಿಂದಲೇ ಪೂರೈಕೆಯಾಗುತ್ತದೆ. ಭಾರತಕ್ಕೆ ಪ್ರತೀ ತಿಂಗಳಿಗೆ ಸುಮಾರು 2ಲಕ್ಷ ಟನ್ ಗಳಷ್ಟು ಸೂರ್ಯಕಾಂತಿ ಎಣ್ಣೆ ಉಕ್ರೇನ್ ನಿಂದ ಫೂರೈಕೆಯಾಗುತ್ತದೆ. ಆದರೆ ಈಗ ಆ ಪೂರೈಕೆಗೆ ಬಹುದೊಡ್ಟ ಪೆಟ್ಟು ಬಿದ್ದಿದ್ದು ಭಾರತೀಯ ಮಾರುಕಟ್ಟೆಗೆ ಇದರ ಬಿಸಿ ನೇರವಾಗಿ ತಟ್ಟಿದೆ. ಉಕ್ರೇನ್ ನ ಬಿಕ್ಕಟ್ಟಿನಿಂದಾಗಿ ನೇರವಾಗಿ ಆಹಾರ ಪದಾರ್ಥಗಳ ಪೂರೈಕೆಯಲ್ಲುಂಟಾಗುವ ವ್ಯತ್ಯಾಸವನ್ನು ಸರಿ ಪಡಿಸುವ ಬಗೆಯ ಬಗ್ಗೆ ವಿಶ್ವ ಆಹಾರ ಸಂಸ್ಥೆ ಟ್ವೀಟ್ ಮಾಡಿದೆ.

ಉಕ್ರೇನ್ ಆಹಾರ ಪದಾರ್ಥಗಳ ಪೂರೈಕೆಯಲ್ಲಿ ಮಾತ್ರವಲ್ಲದೆ ವೈದ್ಯಕೀಯ, ವಿಜ್ಞಾನ, ತಂತ್ರಜ್ಞಾನಗಳ ಆಧುನಿಕತೆಯನ್ನು ಅಳವಡಿಸಿಕೊಂಡು  ಶಿಕ್ಷಣದಲ್ಲಿಯೂ ಮುಂದೆವರೆದ ರಾಷ್ಟ್ರವಾಗಿದೆ. ಹೀಗಾಗಿಯೇ ಭಾರತ ಸೇರಿದಂತೆ ಹಲವು ರಾಷ್ಟ್ರಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಅರಸಿಕೊಂಡು ಉಕ್ರೇನ್ ಗೆ  ತೆರಳುತ್ತಾರೆ. ರಾಜಧಾನಿ ಕೀವ್ ನಿಂದ ಸುಮಾರು 480 ಕಿಮೀ ದೂರದಲ್ಲಿರುವ ಖಾರ್ಕಿವ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯವು ದೇಶದಲ್ಲಿ ಹೆಚ್ಚು ಬೇಡಿಕೆಯಿರುವ ವೈದ್ಯಕೀಯ ಕೇಂದ್ರವಾಗಿದೆ.



Join Whatsapp