ಪುಣೆ: ಭಾರತದ ಕೇಂದ್ರ ತನಿಖಾ ಸಂಸ್ಥೆಗಳು ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರನ ನಾಝಿ ಪಡೆಗಳಂತೆ ವರ್ತಿಸುತ್ತಿದೆ ಎಂದು ಮಹಾರಾಷ್ಟ್ರದ ಆಡಳಿತರೂಢ ಶಿವಸೇವೆ ಆರೋಪಿಸಿದೆ.
ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದಕರಿಗೆ ನಿಧಿ ಸಂಗ್ರಹ ಸೇರಿದಂತೆ ಹಲವು ಆರೋಪದಲ್ಲಿ ಇಡಿ ಅಧಿಕಾರಿಗಳಿಂದ ಬಂಧಿತರಾದ ಮಹಾರಾಷ್ಟ್ರ ಸಚಿವ ಮತ್ತು ಹಿರಿಯ ಎನ್.ಸಿ.ಪಿ ಮುಖಂಡ ನವಾಬ್ ಮಲಿಕ್ ಅವರನ್ನು ಬೆಂಬಲಿಸಿ ಶಿವಸೇನೆಯಿಂದ ಈ ಹೇಳಿಕೆ ಹೊರಬಿದ್ದಿದೆ.
ಶಿವಸೇನೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಈ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ನವಾಬ್ ಮಲಿಕ್ ಅವರು ಇಡಿ ಅಧಿಕಾರಿಗಳಿಂದ ಬಂಧನವಾದ ಹೊರತು ಯಾವುದೇ ಭಯವಿಲ್ಲದೆ ನಗು ಮುಖದೊಂದಿಗೆ ಇಡಿ ಕಚೇರಿಯಿಂದ ಹೊರಬಂದು, ಸುಳ್ಳಿನ ಸರಮಾಲೆಗಳ ಮುಂದೆ ತಲೆಬಾಗುವುದಿಲ್ಲ ಎಂದು ಘೋಷಿಸುವ ಮೂಲಕ ವಿರೋಧಿಗಳಿಗೆ ತಿರುಗೇಟು ನೀಡಿದ್ದರು. ಇದರಿಂದ ನಾಝಿ ಪಡೆಗಳಂತೆ ವರ್ತಿಸುವವರಿಗೆ ಸೋಲಾದಂತಾಗಿದೆ ಎಂದು ಶಿವಸೇನೆ ತಿಳಿಸಿದೆ.