ನಾಳೆ ಸಚಿವಾಲಯದ ನೌಕರರ ಸಂಘದ ವತಿಯಿಂದ ಮೌನ ಪ್ರತಿಭಟನೆ

Prasthutha|

ಬೆಂಗಳೂರು: ಸರ್ಕಾರಿ ಸಚಿವಾಲಯದ ನೌಕರರ ಬಹುದಿನಗಳ ಬೇಡಿಕೆಯನ್ನು ಕಂಡು ಕಾಣದಂತಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ಸಚಿವಾಲಯದ ನೌಕರರ ಸಂಘ ಮೌನ ಪ್ರತಿಭಟನೆ ಹಮ್ಮಿಕೊಂಡಿದೆ.
ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಇದೇ ಫೆ.24ರಂದು ಅಂದರೆ ನಾಳೆ ವಿಕಾಸಸೌಧದ ಗಾಂಧಿ ಪ್ರತಿಮೆ ಬಳಿ ಸಂಘ ಮೌನ ಪ್ರತಿಭಟನೆ ನಡೆಸುತ್ತಿರುವುದಾಗಿ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಸ್ಪಷ್ಟಪಡಿಸಿದರು.
ವಿಕಾಸಸೌಧದಲ್ಲಿಂದು ಸಂಘದ ವತಿಯಿಂದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗುರುಸ್ವಾಮಿ, ಸಚಿವಾಲಯದವರಿಗೆ ದುರುದ್ದೇಶಪೂರಕವಾಗಿ ತಹಶೀಲ್ದಾರರಾಗುವ ಅವಕಾಶವನ್ನು ಸರ್ಕಾರ ತಪ್ಪಿಸಿದೆ. ಇಲಾಖೆಗಳನ್ನು ವಿಲೀನಗೊಳಿಸುವ ನೆಪದಲ್ಲಿ ಸಚಿವಾಲಯದ ನೌಕರರಿಗೆ ಇದೀಗ ಅನ್ಯಾಯ ಮಾಡಲು ಹೊರಟಿದೆ.ಕಿರಿಯ ಸಹಾಯಕರ ಹುದ್ದೆಯನ್ನು ರದ್ದುಮಾಡಲು ಹೊರಡುತ್ತಿರುವ ಸರ್ಕಾರದ ಈ ಕ್ರಮ ಖಂಡನೀಯ.ನಮ್ಮ ಮನವಿಯನ್ನು ಸರ್ಕಾರ ಸ್ವೀಕರಿಸಿದರೂ ಇದೂವರೆಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನಮ್ಮನ್ನು ಕರೆಯಿಸಿ ಬೇಡಿಕೆಯನ್ನು ಈಡೇರಿಸುವ ಪ್ರಯತ್ನವನ್ನು ಮಾಡಿಲ್ಲ.ಹೀಗಾಗಿ ಅನಿವಾರ್ಯವಾಗಿ ಈಗ ಅಧಿವೇಶನದ ಬಳಿಕ ನಾಳೆಯಿಂದ ಮೌನಪ್ರತಿಭಟನೆಗೆ ಜಾರಿದ್ದೇವೆ.ಎಲ್ಲಾ ಬೇಡಿಕೆಗಳ ಒತ್ತಾಯಕ್ಕಾಗಿ ಪ್ರತಿಭಟನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಬಿ.ಆರ್.ಕುಮಾರಸ್ವಾಮಿ, ಹರ್ಷಾ, ಶಾಂತರಾಮ್, ಬಿ.ಎ.ಸತೀಶ್ ಕುಮಾರ್, ಮಂಜುಳ, ಮಾರುತಿ, ಜಗದೀಶ್, ವಿದ್ಯಾಶ್ರೀ ಉಪಸ್ಥಿತರಿದ್ದರು.



Join Whatsapp