ಚೆನ್ನೈ: ತಮಿಳುನಾಡಿನ ನಗರ ಪ್ರದೇಶದಲ್ಲಿ ನಡೆದ ಸ್ಥಳೀಯ ಚುನಾವಣೆಗಳಲ್ಲಿ ಎಸ್ ಡಿಪಿಐ ಅದ್ಭುತ ಯಶಸ್ಸನ್ನು ಸಾಧಿಸಿದೆ. ನಗರ ಪ್ರದೇಶದಲ್ಲಿ ಮಾತ್ರ ಎಸ್ ಡಿಪಿಐ 26 ವಾರ್ಡ್ ಗಳನ್ನು ಗೆದ್ದಿದೆ. ಕಳೆದ ವರ್ಷ ಇದ್ದ8 ವಾರ್ಡ್ ಗಳು ಇದೀಗ ಮೂರು ಪಟ್ಟು ಹೆಚ್ಚಾಗಿದೆ.
ಈ ಬಾರಿಯ ನಗರ ಸ್ಥಳೀಯ ಚುನಾವಣೆಯಲ್ಲಿ ಪಕ್ಷವು 1 ಕಾರ್ಪೊರೇಷನ್ ವಾರ್ಡ್, 8 ಪುರಸಭೆ ವಾರ್ಡ್ ಗಳು ಮತ್ತು 17 ಪಟ್ಟಣ ಪಂಚಾಯಿತಿ ವಾರ್ಡ್ ಗಳನ್ನು ಗೆದ್ದಿದೆ. ಗ್ರಾಮೀಣ ಸ್ಥಳೀಯ ಚುನಾವಣೆಯಲ್ಲಿ ಗೆದ್ದರಿರುವ 138 ವಾರ್ಡ್ ಗಳು ಸೇರಿದರೆ ತಮಿಳುನಾಡಿನಲ್ಲಿ ಒಟ್ಟು 164 ವಾರ್ಡ್ ಗಳನ್ನು ಎಸ್ ಡಿಪಿಐ ತನ್ನದಾಗಿಸಿಕೊಂಡಿದೆ.
ಈ ಬಾರಿಯ ಸ್ಥಳೀಯ ಚುನಾವಣೆಯಲ್ಲಿ ಕಳೆದ ಬಾರಿ ಎಐಎಡಿಎಂಕೆ ಗೆದ್ದ ಸ್ಥಾನಗಳನ್ನು ಸಹ ವಶಪಡಿಸಿಕೊಂಡು ಡಿಎಂಕೆ ಮುನ್ನಡೆ ಯಲ್ಲಿದೆ. ಡಿಎಂಕೆ, ಕಾಂಗ್ರೆಸ್, ಸಿಪಿಎಂ, ಸಿ.ಪಿ.ಐ. ಮುಸ್ಲಿಂ ಲೀಗ್, ವಿ.ಸಿ.ಕೆ ಮತ್ತು ಮನಿದನೇಯ ಮಕ್ಕಳ್ ಪಕ್ಷ ಮುಂಚೂಣಿಯಲ್ಲಿದ್ದುಕೊಂಡು ಸ್ಪರ್ಧಿಸಿದವು. ಮುಂಚೂಣಿಯಲ್ಲಿರುವ ಇತರ ಪಕ್ಷಗಳಿಗೂ ಲಾಭವುಂಟಾಗಿದೆ.