ಈ ದೇಶದಲ್ಲಿ 6ತಿಂಗಳವರೆಗೆ ಗರ್ಭಪಾತ ಅಪರಾಧವಲ್ಲ!

Prasthutha|

- Advertisement -

ಬೊಗೊಟಾ: ಕೊಲಂಬಿಯಾದಲ್ಲಿ ಆರು ತಿಂಗಳವರೆಗಿನ ಗರ್ಭಪಾತವನ್ನು ಅಪರಾಧ ಮುಕ್ತಗೊಳಿಸಲಾಗಿದೆ. ಈ ಕುರಿತ ಅರ್ಜಿಗಳ ವಿಚಾರಣೆ ನಡೆಸಿದ ಅಲ್ಲಿನ ಉಚ್ಛ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ವಿಶ್ವದ ಗಮನ ಸೆಳೆದಿದೆ.

9 ನ್ಯಾಯಾಧೀಶರಿದ್ದ ನ್ಯಾಯಪೀಠವು ಈ ಕಾನೂನಿನ ಪರ ಮತ ಚಲಾಯಿಸಿದೆ. ಇದು ಗರ್ಭಪಾತದ ವಿರೋಧಿಸುವ ಸಂಘಟನೆಗಳಿಗೆ ಹಿನ್ನಡೆ ಉಂಟು ಮಾಡಿದ್ದರೆ, ಮಹಿಳಾ ಹಕ್ಕುಗಳ ಸಂಘಟನೆಗಳು ‘ಐತಿಹಾಸಿಕ ನಿರ್ಧಾರ’ ಎಂದು ಬಣ್ಣಿಸಿವೆ.

- Advertisement -


ನ್ಯಾಯಮಂಡಳಿಯು ಈ ಕಾನೂನಿನ ಪರ ಮತ ಚಲಾಯಿಸುವ ಮುನ್ನ, ಮಹಿಳೆಯು ಪ್ರಾಣಾಪಾಯದಲ್ಲಿದ್ದಾಗ, ಭ್ರೂಣ ವಿರೂಪಗೊಂಡಾಗ ಅಥವಾ ಅತ್ಯಾಚಾರ ಪ್ರಕರಣದಲ್ಲಿ ಗರ್ಭಧಾರಣೆ ಹೊಂದಿದ್ದರೆ 24 ವಾರಗಳವರೆಗೆ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಹೇಳಿದೆ.

ಇದರಿಂದಾಗಿ ಕೊಲಂಬಿಯಾದಲ್ಲಿ ಮಹಿಳೆಯರು 24 ವಾರಗಳವರೆಗೆ ಗರ್ಭಪಾತ ಮಾಡಿಸಿಕೊಳ್ಳುವ ಅವಕಾಶ ಪಡೆದಂತಾಗಿದೆ. ಈ ಕಾನೂನಿನ ತರುವಾಯ ದೇಶದಲ್ಲಿ ಪ್ರತಿವರ್ಷ 4 ಲಕ್ಷಕ್ಕೂ ಅಧಿಕ ಗರ್ಭಪಾತಗಳು ನಡೆಯಲಿವೆ ಎಂದು ಅಂದಾಜಿಸಲಾಗಿದೆ.



Join Whatsapp