ಮಂಗಳೂರು: ಎನ್.ಐ.ಟಿ.ಕೆ. ಬಳಿಯಿರುವ ಟೋಲ್ ಗೇಟ್ ವಿರುದ್ಧ ಕಳೆದ ಕೆಲ ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಸಾಮಾಜಿಕ ಕಾರ್ಯಕರ್ತ ಆಪತ್ಬಾಂಧವ ಆಸಿಫ್ ಅವರನ್ನು ಬಂಧಿಸಲಾಗಿದೆ.
ಪೆಂಡಾಲ್, ಸೌಂಡ್ ಸಿಸ್ಟಮ್ ಸಹಿತ ಅಲ್ಲಿದ್ದ ವಸ್ತುಗಳನ್ನು ವಶಕ್ಕೆ ಪಡೆದ ಸುರತ್ಕಲ್ ಪೊಲೀಸರು, ಸಾರ್ವಜನಿಕ ಶಾಂತಿಭಂಗ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಸ್ಥಳಕ್ಕೆ ಸುರತ್ಕಲ್ ವೃತ್ತ ನೀರಿಕ್ಷಕ ಚಂದ್ರಪ್ಪ, ಠಾಣಾಧಿಕಾರಿ ಪುನೀತ್ ಗಾಂವ್ಕರ್, ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.