ಲಕ್ನೋ: ಆದಿತ್ಯನಾಥ್ ರನ್ನು ಬಾಬಾ ಎಂದು ಉಲ್ಲೇಖಿಸುತ್ತಾ ಸಮಾಜವಾದಿ ಪಕ್ಷದ ಸರ್ಕಾರ ತಂದಿರುವ ಮೆಟ್ರೋ ರೈಲು ಮತ್ತು ಮೆಟ್ರೋ ನಿಲ್ದಾಣ ಯೋಜನೆಗಳನ್ನು ಇತ್ತೀಚೆಗಷ್ಟೇ ಬಾಬಾ ಮುಖ್ಯಮಂತ್ರಿಗಳು ಉದ್ಘಾಟನೆ ಮಾಡಿದ್ದಾರೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಲೇವಡಿ ಮಾಡಿದ್ದಾರೆ.
ಆದಿತ್ಯನಾಥ್ ಸರ್ಕಾರ ಸಮಾಜವಾದಿ ಪಕ್ಷದ ಆಡಳಿತಾವಧಿಯ ಸಾಧನೆಗಳ ಲಾಭ ಪಡೆಯುತ್ತಿದೆ. ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ರೈತರು, ವಿದ್ಯಾರ್ಥಿಗಳು ಮತ್ತು ಹಲವು ಕೈಗಾರಿಕೋದ್ಯಮಿಗಳು ಅನುಭವಿಸಿದ ಯಾತನೆಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡರು. ಎಸ್ ಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಇದು ಮರುಕಳಿಸುವುದಿಲ್ಲಎಂದು ಅಖಿಲೇಶ್ ಹೇಳಿದರು.
ಉತ್ತರ ಪ್ರದೇಶದಲ್ಲಿ ಏಳು ಹಂತಗಳ ವಿಧಾನಸಭಾ ಚುನಾವಣೆ ಫೆಬ್ರವರಿ 10 ರಂದು ಪ್ರಾರಂಭವಾಗಿದ್ದುಮೊದಲ ಎರಡು ಹಂತದ ಚುನಾವಣೆ ಪೂರ್ಣಗೊಂಡಿದೆ. ಮುಂದಿನ ಹಂತದ ಚುನಾವಣೆಫೆಬ್ರವರಿ 23,27 ಮಾರ್ಚ್ 3 ಮತ್ತು 7ರಂದು ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.