ಬೆಂಗಳೂರು: ಬೆಲ್ಜಿಯಂ ಹಾಗೂ ಝಾಂಬಿಯಾ ದೇಶಗಳಿಂದ ದುಬೈ ಮಾರ್ಗವಾಗಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಎರಡು ಕೊರಿಯರ್’ಗಳಲ್ಲಿ 9.82 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಬೆಂಗಳೂರು ಕಸ್ಟಮ್ಸ್’ನ ಕೇಂದ್ರ ಗುಪ್ತಚರ ವಿಭಾಗದ ಅಧಿಕಾರಿಗಳು ಪತ್ತೆ ಹಚ್ಚಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
7 ಕೋಟಿ ರೂಪಾಯಿ ಮೌಲ್ಯದ 1.002 ಕೆಜಿ ಹೆರಾಯಿನ್ ಹಾಗೂ 2.82 ಕೋಟಿ ರೂಪಾಯಿ ಮೌಲ್ಯದ 4.58 ಕೆ.ಜಿ. MDMA/ecstasy ಮಾತ್ರೆಗಳನ್ನು ವಶಪಡಿಸಿಕೊಂಡಿರುವುದಾಗಿ ಬೆಂಗಳೂರು ಕಸ್ಟಮ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ತನಿಖೆಯು ಪ್ರಗತಿಯಲ್ಲಿದೆ ಎಂದಿದ್ದಾರೆ