ಹೈದರಾಬಾದ್: ಬುರ್ಖಾಧಾರಿ ಮಹಿಳೆಗೆ ಎಸ್.ಐ’ನಿಂದ ಥಳಿತ; ಸೈಫಾಬಾದ್’ನಲ್ಲಿ ಬಿಗುವಿನ ವಾತಾವರಣ

Prasthutha|

ಹೈದರಾಬಾದ್: ಬುರ್ಖಾಧಾರಿ ಮಹಿಳೆಗೆ ಥಳಿಸಿದ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಸಾರ್ವಜನಿಕರು ಪ್ರತಿಭಟಿಸಿದ್ದು, ಸೈಫಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

- Advertisement -

ಮಧ್ಯರಾತ್ರಿ ಹೈದರಾಬಾದ್ ನ ಬೋವೆನಪಲ್ಲಿ ನಿವಾಸಿ ಮುಹಮ್ಮದ್ ರಿಝ್ವಾನ್ ಅಲಿ ಎಂಬಾತ ತನ್ನ ಐ – 20 ಕಾರಿನಲ್ಲಿ ಕುಟುಂಬ ಸಮೇತವಾಗಿ ತೆರಳುತ್ತಿದ್ದ ವೇಳೆ ಖೈರತಾಬಾದ್ ಮೆಟ್ರೋ ನಿಲ್ದಾಣದ ಬಳಿ ಏಕಾಏಕಿ ಖಾಸಗಿ ಬಸ್ಸೊಂದು ಓವರ್ ಟೇಕ್ ಮಾಡಿತ್ತು. ಇದರಿಂದ ಉಭಯ ತಂಡಗಳ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಕೆಲಕಾಲ ಉದ್ವಿಗ್ನತೆ ನೆಲೆಸಿತ್ತು.

ಉಭಯ ಕಡೆಯವರು ಪರಸ್ಪರ ಕೈ ಮಿಲಾಯಿಸುವ ಹಂತದಲ್ಲಿದ್ದಾಗ ಸ್ಥಳಕ್ಕಾಗಮಿಸಿದ ಪೊಲೀಸರು ಲಾಠಿಚಾರ್ಚ್ ಮಾಡಿ ಗುಂಪನ್ನು ಚದುರಿಸಿದ್ದರು. ಈ ಸಂದರ್ಭದಲ್ಲಿ ಸಬ್ ಇನ್ಸ್ ಪೆಕ್ಟರ್ ಸೂರಜ್ ಕುಮಾರ್ ಎಂಬಾತ ಬುರ್ಖಾಧಾರಿ ಮಹಿಳೆಗೆ ದೊಣ್ಣೆಯಿಂದ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

- Advertisement -

ಸಬ್ ಇನ್ಸ್ ಪೆಕ್ಟರ್ ಸೂರತ್ ಕುಮಾರ್ ನಡೆಯಿಂದ ಆಕ್ರೋಶಿತ ಸಾರ್ವಜನಿಕರು ಸೈಫಾಬಾದ್ ಪೊಲೀಸ್ ಠಾಣೆಯ ಎದುರು ಜಮಾಯಿಸಿ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದೆಂದು ಪಶ್ಚಿಮ ವಲಯ ಹೆಚ್ಚುವರಿ ಡಿಸಿಪಿ ಮುಹಮ್ಮದ್ ಇಕ್ಬಾಲ್ ಸಿದ್ದೀಕಿ ತಿಳಿಸಿದ್ದಾರೆ.



Join Whatsapp