ಯತ್ನಾಳ್ ಅವರ ಶವಯಾತ್ರೆ ನಡೆಸಿದ ಮುಹಮ್ಮದ್ ನಲಪಾಡ್ !

Prasthutha|

ಬೆಂಗಳೂರು : ಬಿಜೆಪಿ ಪಕ್ಷದವರು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದು ಶಾಸಕ ಬಸನಗೌಡ ಯತ್ನಾಳ್ ಈಗಾಗಲೆ ಸತ್ತಿದ್ದಾರೆ. ಅವರ ಶವಯಾತ್ರೆಯನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ನಲಪಾಡ್ ಹೇಳಿದ್ದಾರೆ.

- Advertisement -

ಯತ್ನಾಳ್ ಅವರು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಪಾಕಿಸ್ತಾನದ ಎಜೆಂಟ್ ಅಂತ ಕರೆದಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ಮೌರ್ಯ ಸರ್ಕಲ್ ನ ಲ್ಲಿ ಯುತ್ ಕಾಂಗ್ರೆಸ್ ವತಿಯಿಂದ ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಪ್ರತಿಭಟನೆ ಮಾಡಿದರು. ಯಾವ ಆಧಾರದ ಮೇಲೆ ಅವರು ಹೀಗೆ ಕರೆಯುತ್ತಾರೆ. ಅವರಿಗೆ ನೈತಿಕತೆ ಇಲ್ಲ. ಯತ್ನಾಳ್ ಅಫ್ಘಾನಿಸ್ತಾನದ ಎಜೆಂಟ್ ಅಂತ ನಾನು ಹೇಳುತ್ತೇನೆ. ಅವರು ಈಗಾಗಲೇ ಸತ್ತಿದ್ದಾರೆ. ಅದಕ್ಕಾಗಿ ನಾವೂ ಶವಯಾತ್ರೆ ಮಾಡುತ್ತಿದ್ದೇವೆ. ಇದು ಕೊಳಕು ಬಿಜೆಪಿ ಪಕ್ಷ ಜನ ಇದನ್ನು ಕಿತ್ತು ಹಾಕಬೇಕು ಎಂದಿದ್ದಾರೆ.

ಇನ್ನು ಬಿಜೆಪಿಗೆ ಧಿಕ್ಕಾರ ಕೂಗಿ ಶವಯಾತ್ರೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು ಯತ್ನಾಳ್ ಭಾವಚಿತ್ರವನ್ನು ಚಟ್ಟದ ಮೇಲೆ ಹಾಕಿ ಶವಯಾತ್ರೆ ಮಾಡಿ ಚಿತೆಗೆ ಬೆಂಕಿ ಹಚ್ಚಿ ಸಂಸ್ಕಾರ ಮಾಡಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.



Join Whatsapp