ಕುಡಿದ ಕಾರು ಚಲಾಯಿಸಿ ಇಬ್ಬರ ಪ್ರಾಣ ತೆಗೆದ ಚಾಲಕನಿಗೆ 6.5ವರ್ಷ ಜೈಲು

Prasthutha|

ಬೆಂಗಳೂರು: ಪಾನಮತ್ತನಾಗಿ ಕಾರು ಚಲಾಯಿಸಿ ಇಬ್ಬರ ಸಾವಿಗೆ ಕಾರಣವಾಗಿದ್ದ ಆರೋಪಿಗೆ ಆರೂವರೆ ವರ್ಷ ಸಾಧಾರಣ ಜೈಲು ಶಿಕ್ಷೆ ಹಾಗೂ 1.04 ಲಕ್ಷ ರೂ. ದಂಡ ವಿಧಿಸಿ ಗ್ರಾಮಾಂತರ 7ನೇ ಜಿಲ್ಲಾ ಹೆಚ್ಚುವರಿ ಹಾಗೂ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.

- Advertisement -

ಕಳೆದ 2013ರ ಮಾರ್ಚ್ 4ರಂದು ಭಾನುಕುಮಾರ್ ಮದ್ಯ ಸೇವಿಸಿ ನೈಸ್ ರಸ್ತೆಯ ಎಲೆಕ್ಟ್ರಾನಿಕ್ ಸಿಟಿಯಿಂದ ಬನ್ನೇರುಘಟ್ಟ ರಸ್ತೆ ಮಾರ್ಗದಲ್ಲಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಕಾರು ನಿಯಂತ್ರಣ ತಪ್ಪಿ ನಡುರಸ್ತೆಯಲ್ಲಿ ಪಲ್ಟಿ ಹೊಡೆದು ಮಗುಚಿ ಬಿದ್ದಿತ್ತು. ದುರ್ಘಟನೆಯಲ್ಲಿ ಕಾರಿನಲ್ಲಿದ್ದ ವಿಶ್ವನಾಥ್, ಸಂತೋಷ್ ಸ್ಥಳದಲ್ಲೇ ಮೃತಪಟ್ಟರೆ, ನಿಖಿಲ್‌ ಕುಮಾರ್ ಹಾಗೂ ಮಣಿಕಂಠ ಎಂಬುವರು ಗಾಯಗೊಂಡಿದ್ದರು‌.

ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿಯಾಗಿದ್ದ ಇನ್ಸ್​ಪೆಕ್ಟರ್ ಬಿ.ಕೆ.ಶೇಖರ್ 2013ರಲ್ಲಿ ಆರೋಪಿ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಆರೋಪಿ ಮೇಲಿನ ಆರೋಪ ಸಾಬೀತಾಗಿದ್ದರಿಂದ ಕೋರ್ಟ್​ ಆರೂವರೆ ವರ್ಷಗಳ ಸಾಧಾರಣ ಶಿಕ್ಷೆ ಹಾಗೂ 1.04 ಲಕ್ಷ ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿಯಾಗಿ 1 ತಿಂಗಳ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.



Join Whatsapp