ಮಂಗಳೂರು: ಸಯ್ಯಿದ್ ಮದನಿ ಅರಬಿಕ್ ಕಾಲೇಜಿನಲ್ಲಿ ನಾಲ್ಕು ದಶಕಗಳ ಕಾಲ ಮುದರ್ರಿಸ್ ಆಗಿದ್ದ ಪ್ರಮುಖ ವಿದ್ವಾಂಸ ಮಲಪ್ಪುರಂ ಜಿಲ್ಲೆಯ ಪೆರಿಂದಲ್ ಮಣ್ಣ ತಾಝೆಕ್ಕೋಡ್ ನಿವಾಸಿ ಕೆ.ಎನ್. ಅಬ್ದುಲ್ಲಾ ಮುಸ್ಲಿಯಾರ್(91) ಸ್ವಗೃಹದಲ್ಲಿ ಇಂದು ಮುಂಜಾನೆ ನಿಧನರಾಗಿದ್ದಾರೆ.
ತಾಝೆಕ್ಕೋಡ್ ಮೊಹಲ್ಲಾ ಖಾಝಿ ಮತ್ತು ಅಧ್ಯಕ್ಷರಾಗಿದ್ದ ಅಬ್ದುಲ್ಲಾ ಮುಸ್ಲಿಯಾರ್ ರ ನಿಧನಕ್ಕೆ ಸುನ್ನೀ ಯುವಜನ ಸಂಘ ರಾಜ್ಯ ಸಮಿತಿಯು ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಮೃತರು ಪತ್ನಿ, ಮಕ್ಕಳು, ಅಳಿಯ ಮಂಗಳೂರು ಜೆಪ್ಪು ಮುದರ್ರಿಸ್ ಮುಹಮ್ಮದ್ ಮದನಿ ಸಹಿತ ಅಪಾರ ಬಂಧು ಬಳಗ ಮತ್ತು ಸಾವಿರಾರು ಶಿಷ್ಯಂದಿರನ್ನು ಅಗಲಿದ್ದಾರೆ. ದಫನ ಕಾರ್ಯವು ಇಂದು ಸಂಜೆ ನಾಲ್ಕು ಗಂಟೆಗೆ ತಾಝೆಕ್ಕೋಡ್ ಜುಮಾ ಮಸ್ಜಿದ್ ದಫನ ಭೂಮಿಯಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಮೃತರ ಹೆಸರಲ್ಲಿ ಪ್ರಾರ್ಥನಾ ಸಂಗಮಗಳನ್ನು ಏರ್ಪಡಿಸಲು ಮತ್ತು ಮಯ್ಯಿತ್ ನಮಾಝ್ ನಿರ್ವಹಿಸಲು ರಾಜ್ಯ ನಾಯಕರು ಕರೆ ನೀಡಿದ್ದಾರೆ