ನೋಡ ನೋಡುತ್ತಿದ್ದಂತೆಯೇ ಈಜುಗಾರನನ್ನು ಎಳೆದೊಯ್ದ ಬೃಹತ್ ತಿಮಿಂಗಿಲ !

Prasthutha|

ಸಿಡ್ನಿ: ಬೀಚ್ ಬಳಿಯಲ್ಲಿ ಈಜುತ್ತಿದ್ದ ವ್ಯಕ್ತಿಯೋರ್ವನನ್ನ ಬೃಹತ್ ಗಾತ್ರದ ಬಿಳಿ ತಿಮಿಂಗಿಲವೊಂದು ಎಳೆದೊಯ್ದ ಭಯಾನಕ ಘಟನೆ ಆಸ್ಟ್ರೇಲಿಯಾದ ಸಿಡ್ನಿ ಬೀಚ್’ನಲ್ಲಿ ನಡೆದಿದೆ.
ಸಿಡ್ನಿ ನಗರದಿಂದ ದಕ್ಷಿಣಕ್ಕೆ 12 ಮೈಲುಗಳಷ್ಟು ದೂರದಲ್ಲಿರುವ ಲಿಟಲ್ ಬೇ ಬೀಚ್‌’ನಲ್ಲಿ ಬುಧವಾರ ಮಧ್ಯಾಹ್ನ ಘಟನೆ ನಡೆದಿದ್ದು, ಈ ವೇಳೆ ಸ್ಥಳೀಯ ಮೀನುಗಾರರ ಮೊಬೈಲ್’ನಲ್ಲಿ ಈ ಭೀಕರ ದೃಶ್ಯ ಸೆರೆಯಾಗಿದೆ.

- Advertisement -
https://twitter.com/saltwaterfish/status/1494134098675355649?t=5olnQT0ylzcljcjVbYNeOw&s=19

ನತದೃಷ್ಟ ಈಜುಗಾರನನ್ನು
ಸೈಮನ್ ನೆಲ್ಲಿಸ್ಟ್ [35] ಎಂದು ಗುರುತಿಸಲಾಗಿದೆ. ಸೈಮನ್ ಬ್ರಿಟಿಷ್ ಪ್ರಜೆಯಾಗಿದ್ದು, ಸಿಡ್ನಿಯ ಸ್ಕೂಬಾ ಡೈವಿಂಗ್ ಸೋಶಿಯಲ್ ಕ್ಲಬ್‌ನ ಸದಸ್ಯರಾಗಿದ್ದರು ಮತ್ತು ಕಡಲತೀರದಲ್ಲಿ ಸಾಮಾನ್ಯವಾಗಿ ಈಜಲು ತೆರಳುತ್ತಿದ್ದರು ಎಂದು ಬಿಬಿಸಿ ವರದಿ ಮಾಡಿದೆ.
1963ರ ಬಳಿಕ ಸಿಡ್ನಿಯಲ್ಲಿ ನಡೆದ ಮೊದಲ ಮಾರಣಾಂತಿಕ ಶಾರ್ಕ್ ದಾಳಿ ಇದಾಗಿದೆ. ಶಾರ್ಕ್ ದಾಳಿಯ ಹಿನ್ನೆಲೆಯಲ್ಲಿ ಸಿಡ್ನಿ ಬೀಚ್‌ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಲಿಟಲ್ ಬೇ ಅನ್ನು ಒಳಗೊಂಡಿರುವ ರಾಂಡ್ವಿಕ್ ಕೌನ್ಸಿಲ್‌’ನ ಮೇಯರ್ ಡೈಲನ್ ಪಾರ್ಕರ್, ಘಟನೆಯಿಂದ ಇಡೀ ರಾಷ್ಟ್ರಕ್ಕೆ ಆಘಾತವಾಗಿದೆ ಎಂದಿದ್ದಾರೆ.



Join Whatsapp