ಏಕಾಂಗಿ ಮಹಿಳಾ ಪ್ರಯಾಣಿಕರಿಗೆ ಮದೀನಾ ಸುರಕ್ಷಿತ ನಗರ, ದುಬೈಗೆ 3ನೇ ಸ್ಥಾನ

Prasthutha|

ರಿಯಾದ್: ಸೌದಿ ಅರೇಬಿಯಾದ ಪವಿತ್ರ ನಗರ ಮದೀನಾವು ಏಕಾಂಗಿ ಮಹಿಳಾ ಪ್ರಯಾಣಿಕರಿಗೆ ಅತ್ಯಂತ ಸುರಕ್ಷಿತ ನಗರಗಳ ಪೈಕಿ ಮೊದಲ ಸ್ಥಾನದಲ್ಲಿದೆ ಎಂದು ಯುನೈಟೆಡ್ ಕಿಂಗ್ಡಮ್ ಮೂಲದ ಟ್ರಾವೆಲ್ ಇನ್ಶೂರೆನ್ಸ್ ಕಂಪನಿ ಇನ್ಶುರ್ ಮೈಟ್ರಿಪ್ ನಡೆಸಿದ ಅಧ್ಯಯನ ತಿಳಿಸಿದೆ.

- Advertisement -

InsureMyTrip ವೆಬ್ ಸೈಟ್ ಪ್ರಕಾರ ಶೇಕಡಾ 84 ರಷ್ಟು ಏಕಾಂಗಿ ಮಹಿಳಾ ಪ್ರಯಾಣಿಕರು ಅವರ ಅಗತ್ಯಗಳನ್ನು ಪೂರೈಸಲು ಪ್ರಯಾಣ ಬೆಳೆಸುತ್ತಾರೆ ಎಂದು ಅಧ್ಯಯನದಿಂದ ಬಹಿರಂಗವಾಯಿತು.

ಉಪ – ಸೂಚ್ಯಂಕಗಳಲ್ಲಿ ಲಿಂಗ ಭೇದ ಮತ್ತು ರಾತ್ರಿಯಲ್ಲಿ ಏಕಾಂಗಿಯಾಗಿ ನಡೆಯಲು ಸುರಕ್ಷಿತ ಭಾವನೆಯ ಆಧಾರದಲ್ಲಿ ಮದೀನಾ ಅತ್ಯಂತ ಸುರಕ್ಷಿತ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

- Advertisement -

ಥೈಲ್ಯಾಂಡ್ ನ ಚಿಯಾಂಗ್ ಮಾಯ್ ಒಟ್ಟಾರೆ 9.06/ 10 ಅಂಕಗಳೊಂದಿಗೆ ಎರಡನೇ ಸುರಕ್ಷಿತ ನಗರವಾಗಿದೆ ಮತ್ತು 9.04/ 10 ಅಂಕಗಳೊಂದಿಗೆ ದುಬೈ 3ನೇ ಸ್ಥಾನ ಪಡೆದಿದೆ ಎಂದು InsureMyTrip ನಡೆಸಿದ ಅಧ್ಯಯನ ವರದಿ ಮಾಡಿದೆ.

ಇದರ ಹೊರತಾಗಿ ಜೋಹಾನ್ಸ್ ಬರ್ಗ್, ಕೌಲಾಲಂಪುರ್ ಮತ್ತು ದೆಹಲಿ ಮಹಿಳಾ ಏಕಾಂಗಿ ಪ್ರಯಾಣಿಕರಿಗೆ ಅತ್ಯಂತ ಕಡಿಮೆ ಸುರಕ್ಷಿತ ನಗರವೆಂದು ಹೇಳಲಾಗಿದೆ.

ಏಕಾಂಗಿ ಮಹಿಳಾ ಪ್ರಯಾಣಿಕರಿಗೆ ಅಗ್ರ ಐದು ಸುರಕ್ಷಿತ ನಗರಗಳು ಇಂತಿವೆ.

1) ಮದೀನಾ, ಸೌದಿ ಅರೇಬಿಯಾ 10/10
2) ಚಿಯಾಂಗ್ ಮಾಯ್, ಥೈಲ್ಯಾಂಡ್ 9.06/10
3) ದುಬೈ, ಯುಎಇ 9.04/10
4) ಕ್ಯೋಟೋ, ಜಪಾನ್ 9.02/10
5) ಮಕಾವು, ಚೀನಾ

ಮಹಿಳಾ ಏಕಾಂಗಿ ಪ್ರಯಾಣಿಕರಿಗೆ ಐದು ಕಡಿಮೆ ಸುರಕ್ಷಿತ ನಗರಗಳು.

1) ಜೋಹಾನ್ಸ್ಬರ್ಗ್, ದಕ್ಷಿಣ ಆಫ್ರಿಕಾ 0/10
2) ಕೌಲಾಲಂಪುರ್, ಮಲೇಷ್ಯಾ 2.98/10
3) ದೆಹಲಿ, ಭಾರತ 3.39/10
4) ಜಕಾರ್ತ, ಇಂಡೋನೇಷ್ಯಾ 3.47/10
5) ಪ್ಯಾರಿಸ್, ಫ್ರಾನ್ಸ್ 3.78/10



Join Whatsapp