ಸಾರ್ವಜನಿಕವಾಗಿ ಶಿರವಸ್ತ್ರ ಧರಿಸುವುದನ್ನು ಹಿಂದೂ ಸಮಾಜ ಸಹಿಸಲ್ಲ: ಪ್ರಜ್ಞಾ ಠಾಕೂರ್

Prasthutha|

ಭೋಪಾಲ್:  ಮುಸ್ಲಿಂ ವಿದ್ಯಾರ್ಥಿಗಳಿಗೆ ಶಿರವಸ್ತ್ರ ಧರಿಸಲು ಅನುಮತಿ ನಿರಾಕರಿಸಿರುವ ವಿರುದ್ಧದ ಆಕ್ರೋಶದ ನಡುವೆ ಬಿಜೆಪಿ ಸಂಸದೆ, ಮಾಲೆಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಪ್ರಜ್ಞಾ ಠಾಕೂರ್ ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾರೆ.

- Advertisement -

ವಿವಾದಿತ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿರುವ ಪ್ರಜ್ಞಾ ಠಾಕೂರ್, “ಇದು ಹಿಂದೂಗಳ ದೇಶವಾಗಿದ್ದು, ಹಿಂದೂಗಳು ಮಹಿಳೆಯರನ್ನು ಪೂಜಿಸುತ್ತಾರೆ. ಹೀಗಾಗಿ ದೇಶದಲ್ಲಿ ಶಿರವಸ್ತ್ರ ಧರಿಸುವ ಅಗತ್ಯವಿಲ್ಲ. ತಾವು ಸುರಕ್ಷಿತರಲ್ಲ ಎಂದು ಭಾವಿಸುವವರು ಮನೆಗಳಲ್ಲಿ ಶಿರವಸ್ತ್ರ ಧರಿಸಬೇಕು. ಸಾರ್ವಜನಿಕವಾಗಿ ಶಿರವಸ್ತ್ರ ಧರಿಸುವುದನ್ನು ಸಹಿಸಲಾಗದು. ಮನೆಯಿಂದ ಹೊರ ಬರುವಾಗ ಮುಸ್ಲಿಂ ಮಹಿಳೆಯರು ಶಿರವಸ್ತ್ರ ಧರಿಸಬಾರದು. ನಿಮಗೆ ಮದರಸಾ ಇದೆ, ಅಲ್ಲಿ ನೀವು ಶಿರವಸ್ತ್ರ ಧರಿಸಿದರೆ ನಮಗೆ ಏನೂ ತೊಂದರೆಯಿಲ್ಲ. ಆದರೆ, ಸಾರ್ವಜನಿಕವಾಗಿ ಇರುವುದು ‘ಹಿಂದೂ ಸಮಾಜ’ವಾಗಿದೆ. ಅಲ್ಲಿ ಶಿರವಸ್ತ್ರ ಅಗತ್ಯವಿಲ್ಲ” ಎಂದು ಮಧ್ಯಪ್ರದೇಶದ ಭೋಪಾಲ್‌ನ ದೇವಸ್ಥಾನವೊಂದರಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಪತ್ರಕರ್ತೆ ರಾಣಾ ಆಯೂಬ್ ಸೇರಿದಂತೆ ಹಲವು ಮಂದಿ ಪ್ರಜ್ಞಾ ಠಾಕೂರ್‌ ಹೇಳಿಕೆಯನ್ನು ಖಂಡಿಸಿದ್ದಾರೆ.



Join Whatsapp