ಖುಷಿನಗರ: ಮದುವೆ ಕಾರ್ಯಕ್ರಮದ ಸಂದರ್ಭದಲ್ಲಿ ಬಾವಿಗೆ ಬಿದ್ದು ಸುಮಾರು 13 ಮಂದಿ ಮಹಿಳೆಯರು ಸಾವನ್ನಪ್ಪಿರುವ ಘಟನೆ ಇಲ್ಲಿನ ನೆಬುವಾ ನೌರಂಗಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮದುವೆ ನಡೆಯುತ್ತಿದ್ದ ಈ ಸ್ಥಳದಲ್ಲಿ ಒಂದು ದೊಡ್ಡದಾದ ಬಾವಿಯಿದ್ದು, ಅದರ ಮೇಲಿಂದ ಸ್ಲ್ಯಾಬ್ ಹಾಕಿ, ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ವಿವಾಹ ಸಮಾರಂಭ ಇದ್ದುದರಿಂದ ಅನೇಕರು ಬಂದು ಅಲ್ಲಿಯೇ ಕುಳಿತಿದ್ದರು. ಬಾವಿಯ ಮೇಲಿನ ಸ್ಲ್ಯಾಬ್ ಗೆ ಭಾರ ಹೆಚ್ಚಿ, ಅದು ಮುರಿದುಬಿದ್ದಿದೆ. ಆಗ ಅದರ ಮೇಲೆ ಕುಳಿತಿದ್ದ ಮಹಿಳೆಯರೆಲ್ಲ ಬಾವಿಗೆ ಬಿದ್ದಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಕುಶಿನಗರ ಜಿಲ್ಲಾಧಿಕಾರಿ ಎಸ್.ರಾಜಲಿಂಗಮ್ ತಿಳಿಸಿದ್ದಾರೆ.