ಹಿಜಾಬ್ ಮತ್ತು ಕೇಸರಿ ನಡುವಿನ ಸಂಘರ್ಷದಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ: ವೆಲ್ಫೇರ್ ಪಾರ್ಟಿ

Prasthutha|

- Advertisement -

ಬೆಂಗಳೂರು: ಹಿಜಾಬ್ ಮತ್ತು ಕೇಸರಿ ನಡುವಿನ ಸಂಘರ್ಷ ರಾಜ್ಯದೆಲ್ಲೆಡೆ ತಿವ್ರ ಸ್ವರೂಪ ಪಡೆದುಕೊಂಡಿದ್ದು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಕೆಟ್ಟ ಪರಿಣಾಮ ಬಿರುತ್ತಿದೆ ಎಂದು ವೆಲ್ಫೇರ್ ಪಾರ್ಟಿ ರಾಜ್ಯಾಧ್ಯಕ್ಷರಾದ ಅಡ್ವೋಕೇಟ್ ತಾಹಿರ್ ಹುಸೇನ್ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅವರು ಹಿಜಾಬ್ ಮತ್ತು ಕೇಸರಿ ನಡುವಿನ ಸಂಘರ್ಷದಿಂದಾಗಿ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಕೆಟ್ಟ ಪರಿಣಾಮ ಬಿರುತ್ತಿರುವುದನ್ನು ಗಮನಿಸಿ ನ್ಯಾಯಾಲಯವು ಮಧ್ಯಂತರ ತಿಪು೯ ನೀಡಿ ಅಂತಿಮ ತಿಪು೯ ನೀಡುವವರೆಗೆ ಯಾವ ಶಾಲಾ ಕಾಲೇಜಿನಲ್ಲಿಯೂ ವಿದ್ಯಾರ್ಥಿಗಳನ್ನು ಶಿಕ್ಷಣ ವಂಚಿತರಾಗದೆ ತರಗತಿಗೆ ಹಾಜರಾಗಲು ಸೂಚಿಸಿದೆ. ಆದರೆ  ತರಗತಿ ನಡೆಯುವ ಕೊಣೆಯಲ್ಲಿ ಯಾವ ಧಮ೯ದ ಹಿಜಾಬ್ ಆಗಲಿ ಕೇಸರಿ ಶಾಲು ಅಥವಾ ದ್ವಜವಾಗಲಿ ಪ್ರವೇಶ ನಿಷೇಧಿಸಿದೆ. ಆದರೆ ನ್ಯಾಯಾಲಯ ತೀಪಿ೯ನ ವಿರುಧ್ಧ  ಶಾಲಾ ಕಾಲೇಜಿನ ವಿದ್ಯಾರ್ಥಿನಿಗಳನ್ನು ಶಿಕ್ಷಣ ಸಂಸ್ಥೆಯ ಹೊರಭಾಗದ ಗೇಟಿನಲ್ಲಿಯೇ  ವಿದ್ಯೆ ಕಲಿಸುವ ಶಿಕ್ಷಕರು ಅವರನ್ನು ಒಳಗಡೆ ಬಿಡದೆ ಅಲ್ಲಿಯೆ ತಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಅದರ ಬೆನ್ನಲ್ಲೆ ಕೆಲವು ಮಾಧ್ಯಮದವರು ವಿಡಿಯೋ ಮುಖಾಂತರ ವಿದ್ಯಾರ್ಥಿನಿಗಳ ಚಿತ್ರಿಕರಣ ನಡೆಸಿ ಸಹ ಶಿಕ್ಷಕರ ಜೊತೆ ಕೈ ಜೊಡಿಸುತ್ತಿದ್ದಾರೆ.  ನಿಜಕ್ಕೂ ನ್ಯಾಯಾಲಯ ವಿರುದ್ಧ ಇವರು ನಡೆದುಕೊಳ್ಳುತ್ತಿರುವದು ಖಂಡನೀಯ. ಈಗಾಗಲೇ ಕೊರೋನಾದಿಂದ ಸರಿಯಾದ ಶಿಕ್ಷಣ ಪಡೆಯದೆ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದು ಮತ್ತೆ ಅವರ ಗಾಯದ ಮೇಲೆ ಬರೆ ಎಳೆಯುವಲ್ಲಿ ಶಿಕ್ಷಕರು ನಿರತರಾಗಿದ್ದಾರೆ ಎಂದು ತಾಹಿರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ನ್ಯಾಯಾಲಯ ಮಧ್ಯಂತರ ತಿಪು೯ ಸರಿಯಾಗಿ ಅಥೈ೯ಸಿಕೊಂಡು ತರಗತಿಯ ಕೊಣೆಯಲ್ಲಿ ಮಾತ್ರ ಧಮ೯ ಸಂಕೇತದ ಬಟ್ಟೆ ಧರಿಸಲು ಅನುಮತಿ ನಿಡಿಲ್ಲ. ಆದರೆ ಶಾಲಾ ಕಾಲೇಜು ಆವರಣದಲ್ಲಿ ಧರಿಸಲು ಯಾವುದೇ ನಿರ್ಬಂಧ ಇಲ್ಲ ಎಂಬುದು ಶಿಕ್ಷಕರು ಅಥ೯ ಮಾಡಿಕೊಂಡು ಮುಂದಿನ ತೀರ್ಪು ಬರುವವರೆಗೆ ವಿದ್ಯಾರ್ಥಿನಿಗಳನ್ನು ಗೇಟಿನ ಒಳಗಡೆ ಬಿಡಲು ಶಾಲಾ ಮಂಡಳಿ ಮುಂದಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.



Join Whatsapp