ಪ್ರೇಮಿಗಳ ದಿನದಂದೇ ಬಹುಪತ್ನಿ ವಲ್ಲಭನ ಬಂಧನ

Prasthutha|

ಭುವನೇಶ್ವರ: ಏಳು ರಾಜ್ಯಗಳಲ್ಲಿ 14 ವಿವಾಹವಾಗಿದ್ದ 48 ವರ್ಷದ ಬಹುಪತ್ನಿ ಪ್ರೇಮಿಯನ್ನು ಬಂಧಿಸಿದ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ.

- Advertisement -

ಕೇಂದ್ರಪಾರ ಜಿಲ್ಲೆಯ ಪಟ್ಕುರಾ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರ ಈ ವ್ಯಕ್ತಿ ಮಹಿಳೆಯರಿಂದ ಹಣ ದೋಚಿ ಓಡಿಹೋಗುತ್ತಿದ್ದ ಎಂದು ಆರೋಪಿಸಲಾಗಿದ್ದು , ಬಂಧಿತ ವ್ಯಕ್ತಿ ಆರೋಪವನ್ನು ನಿರಾಕರಿಸಿದ್ದಾನೆ.

ಆರೋಪಿಯು 1982 ರಲ್ಲಿ ಮೊದಲ ಮದುವೆಯಾಗಿದ್ದು, 2002 ರಲ್ಲಿ ಎರಡನೇ ಮದುವೆಯಾಗಿದ್ದಾನೆ ಎನ್ನಲಾಗಿದೆ. ಈ ಎರಡು ಮದುವೆಗಳಿಂದ ಐದು ಮಕ್ಕಳನ್ನೂ ಪಡೆದಿರುವ ಈತ 2002 ಮತ್ತು 2020 ರ ನಡುವೆ, ಮ್ಯಾಟ್ರಿಮನಿ ವೆಬ್‌ಸೈಟ್‌ಗಳ ಮೂಲಕ ಇತರ ಮಹಿಳೆಯರೊಂದಿಗೆ ಸ್ನೇಹ ಬೆಳೆಸಿ ವಿವಾಹವಾಗಿದ್ದಾನೆ. ಮಧ್ಯವಯಸ್ಕ ಒಂಟಿ ಮಹಿಳೆಯರನ್ನು ಗುರಿಯಾಗಿಸುತ್ತಿದ್ದ ಈತ, ಹೆಚ್ಚಾಗಿ ಮ್ಯಾಟ್ರಿಮನಿ ವೆಬ್‌ಸೈಟ್‌ಗಳಲ್ಲಿ ವಿಚ್ಛೇದಿತರಿಗೆ ಗಾಳ ಹಾಕಿ, ನಂತರ ಅವರನ್ನು ವಿವಾಹವಾಗಿ ಹಣ ಪಡೆದು ವಂಚಿಸುತ್ತಿದ್ದ ಎಂದು ಭುವನೇಶ್ವರ ಪೊಲೀಸ್ ಉಪ ಆಯುಕ್ತ ಉಮಾಶಂಕರ್ ದಾಸ್ ಹೇಳಿದ್ದಾರೆ.

- Advertisement -

ಸದ್ಯ ಈ ಬಹುಪತ್ನಿ ವಲ್ಲಭ ದೆಹಲಿಯಲ್ಲಿ ಶಾಲಾ ಶಿಕ್ಷಕಿಯಾಗಿರುವ ತನ್ನ ಕೊನೆಯ ಪತ್ನಿಯೊಂದಿಗೆ ಭುವನೇಶ್ವರದಲ್ಲಿ ನೆಲೆಸಿದ್ದಾನೆ. ಆಕೆಗೆ ಹೇಗೋ ಆತನ ಹಿಂದಿನ ಮದುವೆಗಳ ಬಗ್ಗೆ ತಿಳಿದು ಪೊಲೀಸರಿಗೆ ದೂರು ನೀಡಿದ್ದಾಳೆ.



Join Whatsapp