ಕೊಡಗು: ಎರಡನೆಯ ದಿನವೂ ಶಿರವಸ್ತ್ರ ಧರಿಸಿ ಬಂದ 28 ವಿದ್ಯಾರ್ಥಿನಿಯರು ಮನೆಗೆ ವಾಪಸ್

Prasthutha|

►ಕರ್ನಾಟಕ ಪಬ್ಲಿಕ್ ಶಾಲೆ ನೆಲ್ಯಹುದಿಕೇರಿಯಲ್ಲಿ ಘಟನೆ

- Advertisement -

ಮಡಿಕೇರಿ: ಹೈ ಕೋರ್ಟ್ ಮಧ್ಯಂತರ ಆದೇಶದ ಮೇರೆಗೆ ಶಿರ ವಸ್ತ್ರ ಧರಿಸಿ ಶಾಲೆಗೆ ಬಂದ ವಿದ್ಯಾರ್ಥಿನಿಯರನ್ನು ಎರಡನೆಯ ದಿನವೂ ಮನೆಗೆ ವಾಪಸು ಕಳಿಸಿರುವ ಪ್ರಸಂಗ ನೆಲ್ಯಹುದಿಕೇರಿಯಲ್ಲಿ ನಡೆದಿದೆ.

ನೆಲ್ಯಹುದಿಕೇರಿಯ ಕರ್ನಾಟಕ ಪಬ್ಲಿಕ್ ಶಾಲೆಯ 45 ಮುಸ್ಲಿಂ ವಿದ್ಯಾರ್ಥಿನಿಯರ ಪೈಕಿ 28 ವಿದ್ಯಾರ್ಥಿನಿಯರು ಶಿರ ವಸ್ತ್ರ ಧರಿಸಿ ಶಾಲೆಗೆ ಬಂದಿದ್ದರು. ನ್ಯಾಯಾಲಯದ ಆದೇಶ ಇರುವುದರಿಂದ ಶಿರ ವಸ್ತ್ರ ಧರಿಸಲು ಅವಕಾಶ ಇರುವುದಿಲ್ಲ ಎಂದು ಶಾಲೆಯ ಮುಖ್ಯೋಪಾಧ್ಯಾಯರು ತಿಳಿಸಿದರು. ನಾವು ಬುರ್ಖಾ ಧರಿಸಿ ಶಾಲೆಗೆ ಬರ್ತಿಲ್ಲ. ಇದುವರೆಗೂ ಶಿರ ವಸ್ತ್ರ ಧರಿಸಿಯೇ ಬರ್ತಾ ಇದ್ದೇವೆ ನಮಗೆ ವಿದ್ಯಾಭ್ಯಾಸದ ಜೊತೆಗೆ ಶಿರವಸ್ತ್ರ ಧರಿಸಲು ಅವಕಾಶ ಕಲ್ಪಿಸಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡಿದರು. ಬಳಿಕ ಶಿರ ವಸ್ತ್ರ ಧರಿಸಲಿಕೆ ಅವಕಾಶ ಇಲ್ಲದೆ 28 ವಿದ್ಯಾರ್ಥಿಗಳು ಶಾಲೆಯಿಂದ ಮನೆಗೆ ತೆರಳಿದರು.

- Advertisement -

ನಿನ್ನೆ ದಿನ ಕೂಡಾ 32 ವಿದ್ಯಾರ್ಥಿಗಳು ಶಿರ ವಸ್ತ್ರ ಧರಿಸಿ ಶಾಲೆ ಬಂದು, ಮನೆಗೆ ವಾಪಸು ಹೋಗಿದ್ದರು.

ನೆಲ್ಯಹುದಿಕೇರಿ ಕರ್ನಾಟಕ ಪಬ್ಲಿಕ್ ಶಾಲೆಯ ಮುಂದೆ ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.



Join Whatsapp