ದೆಹಲಿ ಗಲಭೆ: ಮಸೀದಿ ಸುಟ್ಟು ಹಾಕಿದ ಮೂವರ ವಿರುದ್ಧ ಆರೋಪ ನಿಗದಿಗೊಳಿಸಲು ಸೂಚಿಸಿದ ನ್ಯಾಯಾಲಯ

Prasthutha|

ನವದೆಹಲಿ: ಈಶಾನ್ಯ ದೆಹಲಿಯಲ್ಲಿ 2020ರ ಫೆಬ್ರವರಿಯಲ್ಲಿ ಗಲಭೆ ಸೃಷ್ಟಿಸಿದ, ಮಸೀದಿ ಸುಟ್ಟು ಹಾಕಿದ ಮೂವರ ವಿರುದ್ಧ ಆರೋಪ ನಿಗದಿಪಡಿಸುವಂತೆ ದೆಹಲಿಯ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಸೂಚಿಸಿದೆ.

- Advertisement -

ಕೃತ್ಯದಲ್ಲಿ ಭಾಗಿಯಾಗಿದ್ದರ ಬಗ್ಗೆ ಈ ಮೂವರ ವಿರುದ್ಧ ಮೇಲ್ನೋಟಕ್ಕೆ ಸಾಕಷ್ಟು ಸಾಕ್ಷ್ಯ ಇದೆ ಎಂದು ನ್ಯಾಯಾಧೀಶ ವೀರೇಂದ್ರ ಭಟ್‌ ತಿಳಿಸಿದ್ದಾರೆ.ಭಯದ ವಾತಾವರಣದಿಂದಾಗಿ ಸಾಕ್ಷಿಗಳು ಸಾಕ್ಷ್ಯ ನುಡಿಯಲು ಹಿಂದೇಟು ಹಾಕಿದರು ಎಂದು ಕೂಡ ನ್ಯಾಯಾಲಯ ಇದೇ ವೇಳೆ ತಿಳಿಸಿದೆ.

ದೀಪಕ್‌, ಪ್ರಿನ್ಸ್‌ ಹಾಗೂ ಶಿವ ಎಂಬುವವರು ಪ್ರಕರಣದ ಪ್ರಮುಖ ಆರೋಪಿಗಳು.

- Advertisement -

(ಕೃಪೆ: ಬಾರ್ ಆ್ಯಂಡ್ ಬೆಂಚ್)



Join Whatsapp