ಏರ್ ಏಷ್ಯಾ ವಿಮಾನದಲ್ಲಿ ಹಾವು ಪ್ರತ್ಯಕ್ಷ; ತುರ್ತು ಭೂ ಸ್ಪರ್ಶ

Prasthutha|

ಕೌಲಾಲಂಪುರ: ಮಲೇಷ್ಯಾದ ಕೌಲಾಲಂಪುರದಿಂದ ತವೌಗೆ ತೆರಳುತ್ತಿದ್ದ ಏರ್ ಏಷ್ಯಾ ವಿಮಾನದಲ್ಲಿ ಹಾವು ಪ್ರತ್ಯಕ್ಷಗೊಂಡ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ.

- Advertisement -

ವಿಮಾನವನ್ನು ಕುಚಿಂಗ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದ್ದು, ಸಿಬ್ಬಂದಿ ಹಾವನ್ನು ಹಿಡಿದ ನಂತರ ವಿಮಾನ ಹಾರಾಟ ಪುನರಾರಂಭಿಸಲಾಯಿತು.

ಹಾವು ವಿಮಾನಕ್ಕೆ ಹೇಗೆ ಬಂತು ಎಂಬುದು ತಿಳಿದುಬಂದಿಲ್ಲ. ಹಾವು ಯಾವುದೋ ಪ್ರಯಾಣಿಕನ ಚೀಲದಿಂದ ಅಥವಾ ವಿಮಾನ ನಿಲ್ದಾಣದಲ್ಲೇ ನುಸುಳಿರಬಹುದೆಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

- Advertisement -

ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನದೊಳಗೆ ಹಾವು ಕಂಡುಬಂದ ದೃಶ್ಯವನ್ನು ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.



Join Whatsapp