ನಾಳೆ ರಾಜೀನಾಮೆ ನೀಡುವುದಿಲ್ಲ: ಸಿಎಂ ಇಬ್ರಾಹಿಂ ಯೂಟರ್ನ್ !

Prasthutha|

ಹುಬ್ಬಳ್ಳಿ: ವಿಧಾನಪರಿಷತ್ ಸ್ಥಾನಕ್ಕೆ ಫೆ. 1ರಂದು ರಾಜೀನಾಮೆ ನೀಡುವುದಿಲ್ಲ. ಕಾಂಗ್ರೆಸ್ ಹೈಕಮಾಂಡ್ ನಿಂದ ನನಗೆ ಬುಲಾವ್ ಬಂದಿದೆ ಎಂದು ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

- Advertisement -

ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ನಿಂದ ನನಗೆ ಬುಲಾವ್ ಬಂದಿದೆ. ಹೈಕಮಾಂಡ್ ನವರು ಏನು ಹೇಳುತ್ತಾರೋ ನೋಡೋಣ. ಹೈಕಮಾಂಡ್ ಜೊತೆ ಚರ್ಚಿಸಿದ ನಂತರ ನಮ್ಮ ಮುಖಂಡರ ಜತೆ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಒಂದು ಕಡೆ ಬೈಯ್ಯುತ್ತಿದ್ದಾರೆ, ಮತ್ತೊಂದೆಡೆ ಹೊಗಳುತ್ತಿದ್ದಾರೆ. ವಿ.ಎಸ್. ಉಗ್ರಪ್ಪರಿಂದ ಭ್ರಷ್ಟಾಚಾರ ಆರೋಪ ಮಾಡಿಸುತ್ತಾರೆ. ವಕ್ಫ್ ಬೋರ್ಡ್ ನಲ್ಲಿ ಭ್ರಷ್ಟಾಚಾರ ಮಾಡಿರುವುದಾಗಿ ಆರೋಪ ಮಾಡುತ್ತಾರೆ. ಮನೆ ಮುಂದೆ ಕಟ್ಟಿದ ಶ್ವಾನಗಳಿಂದ ಯಾಕೆ ಬೊಗಳಿಸುತ್ತಿದ್ದೀರಿ. ನಾನು ಏನೂ ಇಲ್ಲ ಅಂದ್ಮೇಲೆ ನಮ್ಮ ಪಾಡಿಗೆ ಬಿಟ್ಟುಬಿಡಬೇಕು ಎಂದು ಅವರು ಹೇಳಿದ್ದಾರೆ.



Join Whatsapp