ಮೃತ ಪತಿಯ ನಕಲಿ ದಾಖಲೆ ನೀಡಿ 3ಕೋಟಿ ರೂ. ವಿಮೆ ಪಡೆದ ಐನಾತಿ ಪತ್ನಿ

Prasthutha|

ಬೆಂಗಳೂರು: ಮೃತಪಟ್ಟ ಪತಿಯ ನಕಲಿ ದಾಖಲೆ ನೀಡಿ ಮೂರು ಕೋಟಿ ವಿಮೆ ಕ್ಲೈಮ್ ಮಾಡಿಕೊಂಡ ಪತ್ನಿಯ ವಿರುದ್ಧ ಇನ್ಶ್ಯೂರೆನ್ಸ್​ ಕಂಪನಿ ದೂರು ನೀಡಿದೆ.

- Advertisement -

ಕೃಷ್ಣಪ್ರಸಾದ್ ಗಾರಲಪಟ್ಟಿ ಎಂಬುವರು ಟಾಟಾ ಎಐಎ ಲೈಪ್ ಇನ್ಶ್ಯೂರೆನ್ಸ್​ ಕಂಪನಿಯಲ್ಲಿ ವಿಮೆ ಪಡೆದಿದ್ದರು. ವಾರ್ಷಿಕವಾಗಿ 51,777 ರೂಗಳು ಕಟ್ಟುವ ಪಾಲಿಸಿ ಪಡೆದಿದ್ದರು. ಆದರೆ ಮೂರು ವರ್ಷ ಪಾಲಿಸಿ ಕಟ್ಟುವ ಮುನ್ನ ಕೃಷ್ಣಪ್ರಸಾದ್ ಮೃತಪಟ್ಟಿದ್ದಾರೆ.

ಕೃಷ್ಣ ಪ್ರಸಾದ್ ವಿಮೆ ನಾಮಿನಿಯಾಗಿದ್ದ ಹೆಂಡತಿ ಸುಪ್ರಿಯಾ ಕೃಷ್ಣಪ್ರಸಾದ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ದಾಖಲೆ ಸಲ್ಲಿಸಿ ಸಾವಿನ ಕ್ಲೈಮ್ ಮಾಡಿ ಕಂಪನಿಯಿಂದ‌ ಮೂರು ಕೋಟಿ ಹಣವನ್ನು ಪಡೆದಿದ್ದರು. ಆದರೆ ಕೃಷ್ಣಪ್ರಸಾದ್ ಕ್ಯಾನ್ಸರ್​​ನಿಂದ ಮೃತಪಟ್ಟಿದ್ದರು. ಈ ವಿಚಾರ ತಿಳಿದ ವಿಮೆ ಕಂಪನಿ ದೂರು ನೀಡಿದೆ.

- Advertisement -

ಪ್ರಕರಣ ಸಂಬಂಧ ಕೋರಮಂಗಲ ಪೊಲೀಸರಿಂದ ತನಿಖೆ ಚುರುಕುಗೊಂಡಿದ್ದು, ವಂಚಕಿಯ ಪತ್ತೆಗೆ ಎರಡು ವಿಶೇಷ ತಂಡ ರಚನೆಯಾಗಿದೆ.

ವಿಮೆ ಕಂಪನಿ ದೂರಿನ ಮೇರೆಗೆ ಮಹಿಳೆಯ ಖಾತೆಯಲ್ಲಿದ್ದ 2.55 ಕೋಟಿ ಹಣವನ್ನು ಫ್ರೀಜ್ ಮಾಡಿದ್ದಾರೆ. ಇನ್ನು ಮಹಿಳೆ ಕಳೆದ ವರ್ಷ ಡಿಸೆಂಬರ್​ ನಿಂದ ಇದುವರೆಗೂ ಮೂರು ಕೋಟಿಯ ಪೈಕಿ 45 ಲಕ್ಷ ರೂ ಗಳನ್ನು ಡ್ರಾ ಮಾಡಿರುವುದು ಕಂಡುಬಂದಿದೆ.



Join Whatsapp