ಗೋವಾ ವಿಮೋಚನೆ ವಿಳಂಬವಾಗಲು ನೆಹರೂ ಕಾರಣ: ಪ್ರಧಾನಿ ಮೋದಿ

Prasthutha|

ಪಣಜಿ: ಜವಾಹರಲಾಲ್ ನೆಹರೂ ಬಯಸಿದ್ದರೆ 1947ರಲ್ಲಿ ಕೆಲವೇ ಗಂಟೆಗಳ ಅವಧಿಯಲ್ಲಿ ಗೋವಾ ವಿಮೋಚನೆ ಸಾಧ್ಯವಿತ್ತು. ಆದರೆ ಪೋರ್ಚುಗೀಸರ ಆಡಳಿತದಿಂದ ಸ್ವತಂತ್ರ್ಯಗೊಳ್ಳಲು ಹದಿನೈದು ವರ್ಷ ಬೇಕಾಯಿತು” ಎಂದು ಪ್ರಧಾನಿ ಮೋದಿ ನೆಹರೂ ಅವರನ್ನು ಟೀಕಿಸಿದ್ದಾರೆ.

- Advertisement -

ಫೆಬ್ರವರಿ 14ರಂದು ನಡೆಯುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಣಜಿ ಸಮೀಪದ ಮಪುಸಾದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಪಕ್ಷ ಗೋವಾವನ್ನು ಇಂದಿಗೂ ತನ್ನ ವೈರಿ ಎಂದು ಪರಿಗಣಿಸುತ್ತಾ ಬಂದಿದೆ. ಪಕ್ಷ ರಾಜ್ಯದಲ್ಲಿ ನಿರಂತರವಾಗಿ ರಾಜಕೀಯ ಅಸ್ಥಿರತೆಯನ್ನು ಹೇರಿರುವುದೇ ಇದಕ್ಕೆ ಸಾಕ್ಷಿ” ಎಂದು ಹೇಳಿದರು.

ಕಾಂಗ್ರೆಸ್ ಹಲವು ಐತಿಹಾಸಿಕ ಸತ್ಯಾಂಶಗಳನ್ನು ಜನರಿಂದ ಹುದುಗಿಸಲಾಗಿದೆ ಎಂದು ಅವರು ಆಪಾದಿಸಿದರು. ಗೋವಾ ವಿಮೋಚನಾ ಚಳವಳಿಯನ್ನು ಕಾಂಗ್ರೆಸ್ ಪಕ್ಷ ಹೇಗೆ ನಾಶ ಮಾಡಿತು ಎನ್ನುವುದನ್ನು ಈ ಹಿಂದೆ ನಾನು ಸಂಸತ್ತಿನಲ್ಲಿ ಮಾತನಾಡುವ ವೇಳೆ ದೇಶಕ್ಕೆ ಸತ್ಯ ಬಹಿರಂಗಪಡಿಸಿದ್ದೆ ಎಂದು ಹೇಳಿದರು



Join Whatsapp