ಕೊಚ್ಚಿ: ಮಲಯಾಳಂ ಸುದ್ದಿವಾಹಿನಿ ಮೀಡಿಯಾಒನ್ ಪರವಾನಗಿಯನ್ನು ರದ್ದುಪಡಿಸಿದ್ದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನಿರ್ಧಾರವನ್ನು ಎತ್ತಿಹಿಡಿದ ಕೇರಳ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಸುದ್ದಿ ವಾಹಿನಿಯ ಮಾತೃಸಂಸ್ಥೆ ಮಾಧ್ಯಮಮ್ ಬ್ರಾಡ್ ಕಾಸ್ಟಿಂಗ್ ಲಿಮಿಟೆಡ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ.
ಪರವಾನಗಿ ರದ್ದುಪಡಿಸಲು ರಾಷ್ಟ್ರೀಯ ಭದ್ರತೆ ಒಂದು ನೆಪ ಎಂದು ಸಂಸ್ಥೆಯು ಅರ್ಜಿಯಲ್ಲಿ ಹೇಳಿದೆ. ಜನವರಿ 31ರಂದು ಸುದ್ದಿವಾಹಿನಿಯ ಪ್ರಸರಣವನ್ನು ಕೇಂದ್ರ ನಿರ್ಬಂಧಿಸಿತು. ಇದನ್ನು ಪ್ರಶ್ನಿಸಿ ಸುದ್ದಿವಾಹಿನಿಯು ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ, ಫೆಬ್ರುವರಿ 8ರಂದು ನ್ಯಾ. ಎನ್ ನಗರೇಶ್ ಅವರಿದ್ದ ಏಕಸದಸ್ಯ ಪೀಠ ಸಚಿವಾಲಯದ ನಿರ್ಧಾರವನ್ನು ಎತ್ತಿಹಿಡಿದಿತ್ತು.