ಅಸ್ಸಾಂ : ಪೊಲೀಸರು ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಹೆಲ್ಮೆಟ್ ಧರಿಸದೇ ಇರುವುದನ್ನು ಪ್ರಶ್ನಿಸಿದ ಪತ್ರಕರ್ತರೊಬ್ಬರ ಮೇಲೆ ಇಬ್ಬರು ಪೊಲೀಸ್ ಪೇದೆಗಳು ಹಲ್ಲೆ ನಡೆಸಿರುವ ಘಟನೆ ಅಸ್ಸಾಂನ ಬಸುಗಾಂವ್ನಹಲ್ಲಿ ನಡೆದಿದೆ.
ಈ ಕುರಿತಂತೆ ಮಾತನಾಡಿದ ಪತ್ರಕರ್ತ ಜಯಂತ್ ದೇಬನಾಥ್, ಬೈಕ್ನ ಲ್ಲಿ ಬಂದ ಇಬ್ಬರು ಪೊಲೀಸರು ಹೆಲ್ಮೆಟ್ ಧರಿಸಿರಲಿಲ್ಲ. ಪೊಲೀಸರೆ ಈ ರೀತಿ ತಪ್ಪು ಮಾಡಿದರೆ ಸಾರ್ವಜನಿಕರಿಗೆ ಹೇಗೆ ಸಂದೇಶ ನೀಡುತ್ತೀರಾ ಎಂದು ಪ್ರಶ್ನಿಸಿದೆ. ಆಗ ನಡುರಸ್ತೆಯಲ್ಲಿಯೇ ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿದರು. ಈ ವೇಳೆ ನಾನು ಪತ್ರಕರ್ತ ಎಂದು ಹೇಳಿದ್ದಕ್ಕೆ ಮತ್ತಷ್ಟು ಹಲ್ಲೆ ನಡೆಸಿದ್ದಾರೆ ಎಂದಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಚಿರಾಂಗ್ ಉಪ ಪೊಲೀಸ್ ವರಿಷ್ಠಾಧಿಕಾರಿ ಲಾಬಾ ಕ್ರಿ ದೇಕಾ ಅವರು, ಈ ವಿಷಯದಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ. ಇಬ್ಬರು ಕಾನ್ಸ್ಟೆಬಲ್ಗಳ ವಿರುದ್ಧ ಜಯಂತ್ ದೇಬನಾಥ್ ಅವರ ಎಫ್ಐಆರ್ ಆಧರಿಸಿ, ನಾವು ಈ ವಿಷಯದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದ್ದಿದ್ದಾರೆ.