ಹಿಜಾಬ್ ವಿಚಾರ| ಸುನೀಲ್ ಕುಮಾರ್ ಗೆ ಮುಸ್ಲಿಂ ಸೆಂಟ್ರಲ್ ಕಮಿಟಿ ವಾರ್ನಿಂಗ್!

Prasthutha|

ವಿದ್ಯಾರ್ಥಿಗಳ ಹೋರಾಟಕ್ಕೆ ಸಮುದಾಯದ ಸಂಪೂರ್ಣ ಬೆಂಬಲ

- Advertisement -

ಮಂಗಳೂರು: ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿದ್ದ ಸಚಿವ ಸುನೀಲ್ ಕುಮಾರ್ ಅವರಿಗೆ ಮುಸ್ಲಿಮ್ ಸೆಂಟ್ರಲ್ ಕಮಿಟಿ ವಾರ್ನಿಂಗ್ ನೀಡಿದ್ದು, ವಿದ್ಯಾರ್ಥಿಗಳ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ಘೋಷಿಸಿದೆ.

- Advertisement -

ಈ ಕುರಿತು ಮಾತನಾಡಿದ ಮಾಜಿ ಎಂಎಲ್ಸಿ, ಮುಸ್ಲಿಂ ಸೆಂಟ್ರಲ್ ಕಮೀಟಿ ಅಧ್ಯಕ್ಷ ಕೆ ಎಸ್ ಮಸೂದ್ ಹಾಜಿ, ಉಡುಪಿ ಸರ್ಕಾರಿ ಕಾಲೇಜು ಇದು ಸರ್ಕಾರದ ಅಧೀನದ ಕಾಲೇಜು. ಅಲ್ಲಿನ ಪ್ರಾಂಶುಪಾಲರು ಸರ್ಕಾರಿ ಸೇವಕರಾಗಿದ್ದಾರೆ. ಸಮವಸ್ತ್ರದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ಸರ್ಕಾರದ ಆದೇಶ ಅಗತ್ಯವಾಗಿದೆ. ಹಿಜಾಬ್ ಧರಿಸಿಬಾರದೆಂದು ಸರ್ಕಾರದ ಆದೇಶ ನೀಡಿದೆಯಾ? ಯಾರ ಆದೇಶ ಶಾಲಾ ಪ್ರಾಂಶುಪಾಲರು ಪಾಲಿಸಿದ್ದಾರೆ ಸಾಬೀತು ಪಡಿಸಲಿ ಎಂದು ಪ್ರಶ್ನಿಸಿದ್ದಾರೆ.

ಸರ್ಕಾರ ಆದೇಶ ನೀಡಿದ್ರೆ ಅದರ ಪ್ರತಿ ಬಹಿರಂಗ ಪಡಿಸಲಿ. ವಿದ್ಯಾರ್ಥಿಗಳ ವಿಚಾರದಲ್ಲಿ ಯಾರೂ ಕೂಡ ರಾಜಕೀಯ ಮಾಡುಬಾರದು. ಈ ಬಗ್ಗೆ ದ.ಕ ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮೀಟಿಯಿಂದ ಎಲ್ಲಾ ಅಧಿಕಾರಿ, ಮುಖ್ಯಮಂತ್ರಿ ಸಚಿವರಿಗೆ ಪತ್ರ ಬರೆಯಲಾಗಿದೆ. ವಿದ್ಯಾರ್ಥಿನಿಯರನ್ನು ಹೇಗೆ ಕಾಲೇಜಿನಿಂದ ಹೊರ ಹಾಕಿದ್ರು?. ಕಾಲೇಜುಗಳಲ್ಲಿ ಕೇಸರಿ ಹಾಕಲಿ, ನಾಮ ಹಾಕಲಿ ನಮ್ಮ ಅಡ್ಡಿ ಇಲ್ಲ. ಆದ್ರೆ ಕಮ್ಯುನಲ್ ಮಾಡಬೇಡಿ, ನಿಮ್ಮ ಜಾತಿ ನೀವು ಆರಾಧನೆ ಮಾಡಿ ಎಂದು ಮಸೂದ್ ಕೇಳಿಕೊಂಡಿದ್ದಾರೆ.

ದ.ಕ ಜಿಲ್ಲೆಯ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಅವರು ಮಾತನಾಡುವಾಗ ನಾಲಗೆ ಸಲ್ಪ ಹಿಡಿತದಲ್ಲಿ ಇರಲಿ. ಬಿಟ್ಟು ಬಿಟ್ರೆ ಉಡುಪಿ ಶಾಸಕರಾಗಲಿ, ಕುಂದಾಪುರ ಶಾಸಕರಾಗಲಿ ಯಾವ ಶಾಸಕರಾಗಲಿ ಪ್ರತಿಯೊಬ್ಬರ ಹಣೆಬರಹ ನನಗೆ ಗೊತ್ತಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಸಂವಿಧಾನದಲ್ಲಿ ಇರುವ ನಮ್ಮ ಹಕ್ಕನ್ನು ಕೇಳಲು ಈಗ ವಿದ್ಯಾರ್ಥಿನಿಯರು ಹೈಕೋರ್ಟ್ ಗೆ ಹೋಗಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ ಇದಾಗಿದ್ದು, ಇದರ ವಿರುದ್ದ ರಾಜಕೀಯ ಮಾಡಬೇಡಿ. ಮುಸಲ್ಮಾನರಿಗೆ ಕುರ್ ಆನ್ ಹದೀಸ್ ಇದೆ. ಅದನ್ನು ನಾವು ಪಾಲನೆ ಮಾಡ್ತೇವೆ. ಅದಕ್ಕೆ ನೀವು ಯಾರು ಕೈ ಹಾಕೋದು ಬೇಡ ಎಂದು ಸೆಂಟ್ರಲ್ ಕಮಿಟಿ ಅಧ್ಯಕ್ಷ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಸಂಪೂರ್ಣ ಬೆಂಬಲ 6 ವಿದ್ಯಾರ್ಥಿನಿಯರಿಗೆ ಇದೆ. ಎಲ್ಲಾ ಸಂಸ್ಥೆಗಳು ಬೆಂಬಲ ಕೊಟ್ಟಿದ್ದಾರೆ. ನ್ಯಾಯಾಲಯಕ್ಕೆ ಒಂದೇ ಕೋರಿಕೆ ಸಂವಿಧಾನದ ಪ್ರಕಾರ ನಮಗೆ ರಕ್ಷಣೆ ಕೊಡಿ. ನ್ಯಾಯಾಲಯ 8 ರಂದು ತೀರ್ಪು ನೀಡುವ ಬಗ್ಗೆ ಮಾಹಿತಿ ನೀಡಿದೆ. ಇದರ ಮಧ್ಯೆ ಸರ್ಕಾರದ ಹೊರಡಿಸಿದ ಈ ಆದೇಶ ಸರಿಯಾ..? ಸಂವಿಧಾನದ ಪ್ರಕಾರ ಇದು ಸರಿಯೇ..? ಎಂದು ಪ್ರಶ್ನೆ ಮಾಡಿದ್ದಾರೆ.

ಸರ್ಕಾರದ ಏನಾದ್ರು ಈ ವಿಚಾರದಲ್ಲಿ ತಪ್ಪಾಗಿ ಕ್ರಮ ಕೈಗೊಂಡರೆ ನಾನು ರಾಜಕೀಯ ಮಾಡಲ್ಲ ನಾವೆಲ್ಲ ಒಂದಾಗ್ತೇವೆ. ಯಾವಾಗ ಎನ್ ಆರ್ಸಿ ಗೋಷ್ಕರ ಲಕ್ಷ ಲಕ್ಷ ಜನ ಸೇರಿದ್ರ ಅದಕ್ಕಿಂತ ಡಬಲ್ ಜನ ನಮ್ಮ ಜಿಲ್ಲೆಯಲ್ಲಿ ಮಕ್ಕಳಿಗಾಗಿ ಮಕ್ಕಳ ರಕ್ಷಣೆಗಾಗಿ ಸೇರ್ತಾರೆ ಎಂದು ಮಸೂದ್ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.



Join Whatsapp