ಮಂಡ್ಯ: ಅಪ್ರಾಪ್ತ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿ ಮತ್ತು ಆಲದಹಳ್ಳಿಯಲ್ಲಿ ನಡೆದಿದೆ.
ಚೊಟ್ಟನಹಳ್ಳಿಯ ರಶ್ಮಿ (17) ಮತ್ತು ಆಲದಹಳ್ಳಿಯ ಶಶಾಂಕ್ (17) ಮೃತ ಪ್ರೇಮಿಗಳು.
ಮಳವಳ್ಳಿಯ ಶಾಂತಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಶಶಾಂಕ್ ಮತ್ತು ರಶ್ಮಿ, ಪರಸ್ಪರ ಪ್ರೀತಿಸುತ್ತಿದ್ದು ನಿನ್ನೆ ಸಂಜೆ ಚೊಟ್ಟನಹಳ್ಳಿಯ ಮನೆಯಲ್ಲಿ ನೇಣು ಬಿಗಿದುಕೊಂಡು ರಶ್ಮಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ರಶ್ಮಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಶಶಾಂಕ್ ಆಲದಹಳ್ಳಿಯಲ್ಲಿ ವಿಷ ಸೇವಿಸಿದ್ದಾನೆ. ಕೂಡಲೇ ಅಸ್ವಸ್ಥ ಶಶಾಂಕ್ನನ್ನು ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಇವರಿಬ್ಬರ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ ಈ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.