ದಾರುನ್ನೂರ್ UAE ಇದರ 7ನೇ ವಾರ್ಷಿಕ ಮಹಾ ಸಭೆ ಮತ್ತು ನೂತನ ಸಮಿತಿ ರಚನೆ

Prasthutha|

- Advertisement -

ದುಬೈ: ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡಬಿದ್ರಿ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಯು ಎ ಇ ಕಲ್ಚರಲ್ ಸೆಂಟರ್ ತನ್ನ  7 ನೇ ವಾರ್ಷಿಕ ಮಹಾ ಸಭೆಯನ್ನು  ದಿನಾಂಕ 29/01/2022 ನೇ ಶನಿವಾರದಂದು ರಾತ್ರಿ 8:30 ಕ್ಕೆ ಸರಿಯಾಗಿ ದೇರಾ ದುಬೈಯಲ್ಲಿರುವ ಮಾಲಿಕ್ ರೆಸ್ಟೋರೆಂಟ್ ನಲ್ಲಿರುವ ಆಡಿಟೋರಿಯಮ್ ನಲ್ಲಿ ಜನಾಬ್ ಸಂಶುದ್ದೀನ್ ಸೂರಲ್ಪಾಡಿಯವರ ಅದ್ಯಕ್ಷತೆಯಲ್ಲಿ ನೆರವೇರಿಸಿತು.

ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಅತ್ತಿಪೆಟ್ಟ ಉಸ್ತಾದ್ ರವರ ಪ್ರಮುಖ ಶಿಷ್ಯರಾದ  ಉಸ್ತಾದ್ ಸಿರಾಜುದ್ದೀನ್ ಫೈಝಿ ಬಂಟ್ವಾಳ ಮತ್ತು  ದಾರುನ್ನೂರ್ ಯು ಎ ಇ  ಇದರ ಪ್ರಮುಖರಾದ ಸಯ್ಯದ್ ಅಸ್ಕರ್ ಅಲಿ ತಂಗಳ್ ಕೋಲ್ಪೆ , ಜನಾಬ್ ಮಹಮ್ಮದ್ ಮುಸ್ತಾಕ್ ಕದ್ರಿ, ಉಸ್ತಾದ್ ಸುಲೈಮಾನ್ ಮೌಲವಿ ಕಲ್ಲೆಗ, ಜನಾಬ್ ಅಶ್ರಫ್ ಖಾನ್ ಮಾಂತೂರು, , ಜನಾಬ್ ರವೂಫ್ ಹಾಜಿ ಕೈಕಂಬ, ಜನಾಬ್ ಮಹಮ್ಮದ್ ಮಾಡಾವು, ಜನಾಬ್ ಮಹಮ್ಮದ್ ಅಶ್ರಫ್ ಬಾಳೆಹೊನ್ನೂರು, ಜನಾಬ್ ಅಶ್ರಫ್ ನಾಟೆಕಲ್ ಮೊದಲಾದವರು ಉಪಸ್ಥಿತರಿದ್ದರು.

- Advertisement -

ಸಯ್ಯದ್ ಅಸ್ಕರ್ ತಂಗಳ್ ಕೋಲ್ಪೆಯವರ ದುಆ ದ ಬಳಿಕ ದಾರುನ್ನೂರ್ ಯು ಎ ಇ ಕೋಶಾಧಿಕಾರಿ ಜನಾಬ್ ಅಬ್ದುಲ್ ಸಲಾಂ ಬಪ್ಪಳಿಗೆ ಯವರು ಸ್ವಾಗತ ಭಾಷಣಗೈದರು.

ಉಸ್ತಾದ್ ಸಿರಾಜುದ್ದೀನ್ ಫೈಝಿಯವರು ಕಾರ್ಯಕ್ರಮವನ್ನು ಅಲ್ಲಾಹನ  ನಾಮದಿಂದ ಉದ್ಘಾಟಿಸಿದರು. ದಾರುನ್ನೂರ್ ವಿದ್ಯಾ ಕೇಂದ್ರವನ್ನು  ಹತ್ತಿರದಿಂದ ಬಲ್ಲವರಾಗಿರುವುದರಿಂದ ಅಲ್ಲಿಯ ವಿದ್ಯಾಭ್ಯಾಸದ ಗುಣಮಟ್ಟ ಮತ್ತು ನೇತೃತ್ವವನ್ನು ಕೊಂಡಾಡಿದರು.  ಈ ಸಂದರ್ಭ ಸಂಘ ಸಂಸ್ಥೆಗಳಲ್ಲಿ ಕಾರ್ಯಕರ್ತರ  ಪಾತ್ರದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ವ್ಯಕ್ತಿಯ ಒಳಿತು ಮತ್ತು ಕೆಡುಕು ಎರಡಕ್ಕೂ ನಾವು ವಹಿಸುವ ಜವಾಬ್ಧಾರಿ ಮುಖ್ಯ ಪಾತ್ರವಹಿಸುತ್ತದೆ ಮತ್ತು ನಿಸ್ವಾರ್ಥ ಸೇವೆ ನಮ್ಮ ಬದುಕನ್ನು ಯಾವ ರೀತಿ ಹಸನುಗೊಳಿಸಬಹುದು   ಎಂದು ವಿವರಿಸಿದರು.

ವಾರ್ಷಿಕ ವರದಿಯನ್ನು ಜನಾಬ್ ಮಹಮ್ಮದ್ ಶರೀಫ್ ಕೊಡ್ನೀರ್ ರವರು ವಾಚಿಸಿದರು. ವಾರ್ಷಿಕ ಕಾರ್ಯ ಚಟುವಟಿಕೆಗಳ ವಿವರವನ್ನು ಮುಖ್ಯ ಲೆಕ್ಕ ಪರಿಶೋದಕ ಜನಾಬ್ ಅನ್ಸಾಫ್ ಪಾತೂರ್ ರವರು ಮಂಡಿಸಿದರು. ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರವು  ಅನುಮೋದಿಸಲ್ಪಟ್ಟ ಬಳಿಕ ಆದ್ಯಕ್ಷರಾದ ಜನಾಬ್ ಸಂಶುದ್ದೀನ್ ಸೂರಲ್ಪಾಡಿಯವರು ಅವಲೋಕನವನ್ನು ಮಾಡಿ ಕಾರ್ಯಕರ್ತರಿಗೆ ವಿವರಣೆ ನೀಡಿದರು.

2021 ರ ಸಾಲಿನ ಉತ್ತಮ ಸಾಧಕ ಸಮಿತಿಗಳಿಗೆ  ವೇದಿಕೆಯಲ್ಲಿರುವ ಗಣ್ಯರಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಶಾರ್ಜಾ ಸ್ಟೇಟ್ ಸಮಿತಿ ಪ್ರಥಮ ಸ್ಥಾನವನ್ನೂ, ದುಬೈ ಸ್ಟೇಟ್ ಸಮಿತಿ ದ್ವಿತೀಯ ಸ್ಥಾನವನ್ನೂ , ಅಬುಧಾಬಿ ಸ್ಟೇಟ್ ಸಮಿತಿ ತೃತೀಯ ಸ್ಥಾನವನ್ನೂ ಪಡೆಯುವಲ್ಲಿ ಸಫಲವಾಯಿತು.

ಗಣ್ಯರಿಂದ ಅನಿಸಿಕೆ ವಿಭಾಗದಲ್ಲಿ ಜನಾಬ್ ಮಹಮ್ಮದ್ ಮುಸ್ತಾಕ್ ಕದ್ರಿ, ಉಸ್ತಾದ್ ಸುಲೈಮಾನ್ ಮೌಲವಿ ಕಲ್ಲೆಗ, ಜನಾಬ್ ಅಶ್ರಫ್ ಖಾನ್ ಮಾಂತೂರ್, ಜನಾಬ್ ಮಹಮ್ಮದ್ ಮಾಡಾವು , ಜನಾಬ್ ರವೂಫ್ ಹಾಜಿ ಕೈಕಂಬ, ಜನಾಬ್ ಅಶ್ರಫ್ ಬಾಳೆಹೊನ್ನೂರ್ ಮೊದಲಾದವರು ಸಾಂದರ್ಭಿಕವಾಗಿ ದಾರುನ್ನೂರ್ ವಿದ್ಯಾ ಕೇಂದ್ರದ ಯು ಎ ಇ ಯಲ್ಲಿಯ ಕಾರ್ಯಾಚಟುವಟಿಕೆಗಳನ್ನು ಶ್ಲಾಘಿಸಿ ಮಾತನಾಡಿದರು.

ಅದ್ಯಕ್ಷರ ಭಾಷಣದಲ್ಲಿ ಜನಾಬ್ ಸಂಶುದ್ದೀನ್ ಸೂರಲ್ಪಾಡಿಯವರು ಕಳೆದ 7 ವರ್ಷಗಳಿಂದ  ಯು ಎ ಇ ಯಲ್ಲಿ ದಾರುನ್ನೂರ್ ಕಲ್ಚರಲ್ ಸೆಂಟರ್  ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಕಾಶಿಪಟ್ಣದಲ್ಲಿರುವ  ವಿದ್ಯಾ ಸಂಸ್ಥೆಗೆ ಬೆನ್ನೆಲುಬಾಗಿ ಸಹಕರಿಸುತ್ತಿದೆ. ಇದರ ಕ್ರೆಡಿಟ್ ಪ್ರತಿಯೊಬ್ಬ ಕಾರ್ಯಕರ್ತನಿಗೂ ಸಲ್ಲುತ್ತದೆ. ನಮ್ಮ ಸಮಾಜ ಸೇವೆ ನಮ್ಮ  ಜೀವನ ಪರ್ಯಂತ ಸಜೀವವಾಗಿ ಮುಂದುವರಿಸಿಕೊಂಡು ಹೋಗಬೇಕು ಮತ್ತು  ಮುಂದಿನ ತಲೆಮಾರಿನ ಮಕ್ಕಳು ಧಾರ್ಮಿಕ ಮತ್ತು ಲೌಕಿಕ ವಿದ್ಯೆಯಿಂದ ವಂಚಿತರಾಗದಂತೆ ಅದಕ್ಕೆ ಬೇಕಾದ ಅಡಿಪಾಯ  ಹಾಕಿ ಭದ್ರ ಪಡಿಸಬೇಕು ಎಂದು ವಿವರಿಸಿ ಕಳೆದ ಮೂರು ವರ್ಷಗಳ ತನ್ನ ಅದ್ಯಕ್ಷತೆಯ ಅಧಿಕಾರಾವಧಿಯಲ್ಲಿ ತನ್ನ ನಡೆನುಡಿಗಳಲ್ಲಿ ಯಾರಿಗಾದರೂ  ನೋವಾಗಿದ್ದರೆ ಮನ್ನಿಸಲು ವಿನಂತಿಸಿ  2021 ರ ಸಾಲಿನ ಸಮಿತಿಯನ್ನು ಭರ್ಕಾಸ್ತು ಗೊಳಿಸಿರುವುದಾಗಿ ಘೋಷಿಸಿ ,   2022 ರ ಸಾಲಿಗೆ ನೂತನ ಸಮಿತಿಯ ರಚನೆಗೆ ಅನುವು ಮಾಡಿಕೊಟ್ಟು ತನ್ನ ಮಾತಿಗೆ ಪೂರ್ಣ ವಿರಾಮವನ್ನಿತ್ತರು.

ಚುನಾವಣಾಧಿಕಾರಿಯಾಗಿ ಜನಾಬ್ ಮಹಮ್ಮದ್ ಶರೀಫ್ ಕಾವು ರವರನ್ನು ನೇಮಿಸಲಾಯಿತು

2022 ರ ಸಾಲಿಗೆ ದಾರುನ್ನೂರ್ ಯು ಎ ಇ ರಾಷ್ಟ್ರೀಯ ಸಮಿತಿಗೆ ಈ ಕೆಳಗಿನ ಪ್ರಮುಖರನ್ನು ಸಾರಥಿಗಳನ್ನಾಗಿ ಆರಿಸಲಾಯಿತು.

ಮುಖ್ಯ ಪೋಷಕರು – ಜನಾಬ್ ನಿಸಾರ್ ಅಹ್ಮದ್ ಕಾರ್ಕಳ

ಪೋಷಕರು  – ಜನಾಬ್ ಅಬ್ದುಲ್ಲಾ ಹಾಜಿ ಮದುಮೂಲೆ , ಜನಾಬ್ ಅಹ್ಮದ್ ಮತೀನ್ ಚಿಲ್ಮಿ ಮಂಗಳೂರು

ಪ್ರಮುಖ ಧಾರ್ಮಿಕ ಸಲಹೆಗಾರ   – ಉಸ್ತಾದ್ ಅಬ್ದುಲ್ ಸಲಾಂ ಬಾಖವಿ

 ಪ್ರಮುಖ ಸಲಹೆಗಾರ  – ಜನಾಬ್ ಸಂಶುದ್ದೀನ್ ಸೂರಲ್ಪಾಡಿ

ಸಲಹಾ ಸಮಿತಿ ಪ್ರಮುಖರು – ಸಯ್ಯದ್ ಅಸ್ಕರ್ ಅಲಿ ತಂಗಳ್ ಕೋಲ್ಪೆ  , ಜನಾಬ್ ಮುಹಿದ್ದೀನ್ ಕುಟ್ಟಿ ಹಾಜಿ ಕಕ್ಕಿಂಜೆ, ಜನಾಬ್ ಸಂಶುದ್ದೀನ್ ಕಲ್ಕಾರ್, ಉಸ್ತಾದ್ ಶೌಕತ್ ಅಲಿ ಹುದವಿ ,ಜನಾಬ್ ಸಲೀಂ ಅಲ್ತಾಫ್ ಫರಂಗಿಪೇಟೆ, ಜನಾಬ್ ಮಹಮ್ಮದ್ ರಫೀಕ್ ಆತೂರು , ಜನಾಬ್ ಮುಹ್ಸಿನ್ ಅಹ್ಮದ್ ಮೂಡಬಿದ್ರಿ, ಜನಾಬ್ ಇಕ್ಬಾಲ್ ಬಾವ ಬಂಟ್ವಾಳ್ , ಜನಾಬ್ ಅಶ್ರಫ್ ಖಾನ್ ಮಾಂತೂರ್ , ಜನಾಬ್ ಸಂಶುದ್ದೀನ್ ವಳಪಟ್ಟಣಂ, ಜನಾಬ್ ಯೂಸುಫ್ ಈಶ್ವರಮಂಗಲ , ಜನಾಬ್ ಬಶೀರ್ ಬಂಟ್ವಾಳ್ ,ಅಡ್ವೋಕೇಟ್ ಇಬ್ರಾಹಿಂ ಖಲೀಲ್ , ಜನಾಬ್ ಅಬ್ದುಲ್ ಲತೀಫ್ ಹಾಜಿ ಮದರ್ ಇಂಡಿಯ, ಜನಾಬ್ ಮಹಮ್ಮದ್ ಕಲ್ಲಾಪು , ಜನಾಬ್ ಜಬ್ಬಾರ್ ಎಡನೀರ್, ಜನಾಬ್ ಅಶ್ರಫ್ ನಾಟೆಕಲ್ , ಜನಾಬ್ ಅನ್ವರ್ ಹುಸೈನ್  ಅಡ್ಡೂರ್

ಗೌರವಾದ್ಯಕ್ಷರು  – ಜನಾಬ್ ಮಹಮ್ಮದ್ ಮುಸ್ತಾಕ್ ಕದ್ರಿ

ಅದ್ಯಕ್ಷರು  – ಜನಾಬ್ ಮಹಮ್ಮದ್ ಮಾಡಾವು

ಉಪಾದ್ಯಕ್ಷರು – ಜನಾಬ್ ಅಬ್ದುಲ್ ರವೂಫ್ ಹಾಜಿ ಕೈಕಂಬ, ಜನಾಬ್ ಮಹಮ್ಮದ್ ಅಶ್ರಫ್ ಬಾಳೆ ಹೊನ್ನೂರ್ , ಜನಾಬ್ ಮಹಮ್ಮದ್ ರಫೀಕ್ ಸುರತ್ಕಲ್

ಪ್ರಧಾನ ಕಾರ್ಯದರ್ಶಿ – ಜನಾಬ್ ಬದ್ರುದ್ದೀನ್ ಹೆಂತಾರ್

ಕಾರ್ಯದರ್ಶಿ – ಜನಾಬ್ ಮಹಮ್ಮದ್ ಸಾಜಿದ್ ಬಜ್ಪೆ , ಜನಾಬ್ ಮಹಮ್ಮದ್ ಶಬೀರ್ ಸಕಲೇಶಪುರ, ಜನಾಬ್  ಸುಹೈಲ್ ಹಸನ್ ಚೊಕ್ಕಬೆಟ್ಟು

ಕೋಶಾಧಿಕಾರಿ  – ಜನಾಬ್ ಅಬ್ದುಲ್ ಸಲಾಂ ಬಪ್ಪಳಿಗೆ

ಲೆಕ್ಕ ಪರಿಶೋಧಕ  – ಜನಾಬ್ ಅನ್ಸಾಫ್ ಪಾತೂರ್

ಸಹ ಲೆಕ್ಕ ಪರಿಶೋಧಕ – ಜನಾಬ್ ನಾಸಿರ್ ಬಪ್ಪಳಿಗೆ

ಸಂಘಟನೆ ಕಾರ್ಯದರ್ಶಿ  – ಜನಾಬ್ ನವಾಝ್ ಬಿ.ಸಿ ರೋಡ್

ಸಹ ಸಂಘಟನೆ ಕಾರ್ಯದರ್ಶಿ – ಜನಾಬ್ ಅಶ್ರಫ್ ಪರ್ಲಡ್ಕ , ಜನಾಬ್ ಸಫಾ ಇಸ್ಮಾಯಿಲ್ ಬಜ್ಪೆ

ಮೀಡಿಯಾ ಕೋರ್ಡಿನೇಟರ್ – ಜನಾಬ್ ಸಿರಾಜ್ ಬಿ.ಸಿ ರೋಡ್ , ಜನಾಬ್ ಅಶ್ರಫ್ ಬಾಂಬಿಲ

ಧಾರ್ಮಿಕ ಸಲಹೆಗಾರ  – ಉಸ್ತಾದ್  ಸುಲೈಮಾನ್ ಮೌಲವಿ ಕಲ್ಲೆಗ , ಜನಾಬ್ ಸಾಹುಲ್ ಬಿ.ಸಿ ರೋಡ್

                            ಉಸ್ತಾದ್ ಅಬ್ದುಲ್ ರಝಾಕ್ ಪಾತೂರು, ಉಸ್ತಾದ್ ಸಿರಾಜುದ್ದೀನ್ ಫೈಝಿ ಬಂಟ್ವಾಳ್  

ಕನ್ವೀನರ್  – ಜನಾಬ್ ನೂರ್ ಮಹಮ್ಮದ್ ನೀರ್ಕಜೆ, ಜನಾಬ್ ಅಬ್ದುಲ್ ಖಾದರ್ ಬೈತಡ್ಕ , ಜನಾಬ್ ಹನೀಫ್ ಕೆ.ಪಿ ಮೂಡಬಿದ್ರಿ , ಜನಾಬ್ ಇಲ್ಯಾಸ್ ಕಡಬ, ಜನಾಬ್ ಶರೀಫ್ ಕೊಡ್ನೀರ್, ಜನಾಬ್ ಶರೀಫ್ ಕಾವು, ಜನಾಬ್ ಅಬ್ದುಲ್ ಲತೀಫ್ ಕೌಡಿಚ್ಚಾರ್, ಜನಾಬ್ ಅಶ್ರಫ್ ಅರ್ತಿಕೆರೆ  ಜನಾಬ್ ಬಶೀರ್ ಕೆಮ್ಮಿಂಜೆ, ಜನಾಬ್ ಅಬ್ದುಲ್ ರಝಾಕ್ ಸೋಂಪಾಡಿ, ಜನಾಬ್ ಉಸ್ಮಾನ್ ಮರೀಲ್, ಜನಾಬ್ ಅಬೂಬಕ್ಕರ್ ಸಿದ್ದೀಕ್ ಮೂಡಬಿದ್ರಿ, ಜನಾಬ್ ಅಶ್ರಫ್ ಪಾವೂರ್,  , ಜನಾಬ್ ನವಾಝ್ ಮನಲ್,  ಜನಾಬ್ ಇಫ್ತಿಕಾರ್ ಅಡ್ಯಾರ್ ಕಣ್ಣೂರ್, ಜನಾಬ್ ಅಬ್ಬಾಸ್ ಕೇಕುಡೆ  , ಜನಾಬ್ ಸಂಶುದ್ದೀನ್ ಹಮೀದ್ ಮೂಡಬಿದ್ರಿ, ಜನಾಬ್ ಇಸ್ಮಾಯಿಲ್ ಮುಂಧೀರ್ ತೋಡಾರ್ , ಜನಾಬ್ ಜಲೀಲ್ ಗುರುಪುರ, ಜನಾಬ್ ಜಬ್ಬಾರ್ ಕಲ್ಲಡ್ಕ.

ಕಾರ್ಯಕಾರಿ ಸಮಿತಿ ಸದಸ್ಯರು –,ಜನಾಬ್ ಸಮೀರ್ ಇಬ್ರಾಹಿಂ ಕಲ್ಲರೆ, ಜನಾಬ್ ಅಶ್ರಫ್ ಕೆಮ್ಮೀಂಜೆ, ಜನಾಬ್ ಅಬ್ದುಲ್ ರಹ್ಮಾನ್ ಸಜಿಪ, ಜನಾಬ್ ಅಬ್ದುಲ್ ಖಾದರ್ ಕಾರ್ಕಳ, , ಜನಾಬ್ ಮುನೀರ್ ಕಾಞ್ಜಂಗಾಡ್ , ಜನಾಬ್ ಝುಬೈರ್ ತೋಡಾರ್ ಜನಾಬ್ ಯೂನುಸ್ ತಲಪಾಡಿ , ಜನಾಬ್  ತಾಹಿರ್ ಹೆಂತಾರ್ , ಜನಾಬ್ ಇಬ್ರಾಹಿಂ ಅಬೂಬಕ್ಕರ್ ಕುಂಡಾಜೆ, ಜನಾಬ್ ಜಾಬಿರ್ ಬಪ್ಪಳಿಗೆ ಜನಾಬ್ ಅಬ್ದುಲ್ ನಾಸಿರ್ ಸುರತ್ಕಲ್, ಜನಾಬ್ ಅಬ್ದುಲ್ ಅಝೀಝ್ ಸೋಂಪಾಡಿ, ಜನಾಬ್ ಅಝ್ಹರುದ್ದೀನ್ ಹಂಡೇಲ್, ಜನಾಬ್ ನಿಝಾಮ್ ತೋಡಾರ್ , ಜನಾಬ್ ಅನ್ವರ್ ಮಾನಿಲ.

ನೂತನ ಪದಾಧಿಕಾರಿಗಳ ಆಸನ ಸ್ವೀಕಾರದ ಬಳಿಕ  ಎಲ್ಲರೂ ಶುಭ ಹಾರೈಸಿದರು. ಕಾರ್ಯಕ್ರಮದ ಕೊನೆಯಲ್ಲಿ ಜನಾಬ್ ಅಬ್ದುಲ್ ಲತೀಫ್ ಕೌಡಿಚ್ಚಾರ್ ರವರು ನೂತನ ಅದ್ಯಕ್ಷರ ವ್ಯಕ್ತಿ ಪರಿಚಯ ಮತ್ತು ಅನುಭವ ಸಂಪತ್ತನ್ನು ವಿವರಿಸಿ ನೂತನ ಸಮಿತಿಗೆ ಶುಭ ಹಾರೈಸಿ  ವಂದನಾರ್ಪಣೆ ಗೆಯ್ಯುದರೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.



Join Whatsapp