ಝೆಡ್ ಶ್ರೇಣಿ ಭದ್ರತೆ ತಿರಸ್ಕರಿಸಿದ ಉವೈಸಿ: ಆರೋಪಿಗಳ ವಿರುದ್ಧ UAPA ವಿಧಿಸಲು ಒತ್ತಾಯ

Prasthutha|

ದೆಹಲಿ : ಕೇಂದ್ರ ಗೃಹ ಸಚಿವಾಲಯ ನೀಡಿರುವ ಝೆಡ್ ಕೆಟಗರಿ ಭದ್ರತೆಯನ್ನು ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಶುಕ್ರವಾರ ತಿರಸ್ಕರಿಸಿದ್ದಾರೆ.

- Advertisement -

ಲೋಕಸಭೆಯಲ್ಲಿ ಮಾತನಾಡಿದ ಉವೈಸಿ, “ನನಗೆ ಸಾವಿನ ಭಯವಿಲ್ಲ. ನನಗೆ ಝಡ್ ಕೆಟಗರಿ ಭದ್ರತೆ ಬೇಡ, ನಾನು ಅದನ್ನು ತಿರಸ್ಕರಿಸುತ್ತೇನೆ. ನನ್ನನ್ನು ‘ಎ’ ವರ್ಗದ ಪ್ರಜೆಯನ್ನಾಗಿ ಮಾಡಿ. ನಾನು ಸುಮ್ಮನಿರುವುದಿಲ್ಲ. ದಯವಿಟ್ಟು ನ್ಯಾಯ ಕೊಡಿ. ಆರೋಪಿಗಳ ವಿರುದ್ಧ ಯುಎಪಿಎ ವಿಧಿಸಿ, ದ್ವೇಷ ನಿಲ್ಲಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 100 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವ ಓವೈಸಿ, ಅವರು ಮೀರತ್‌ನಿಂದ ದೆಹಲಿಗೆ ಹಿಂದಿರುಗುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಗುಂಡು ಹಾರಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ರಾಜ್ಯ ಪೊಲೀಸರು ನಂತರ ಇಬ್ಬರನ್ನು ಬಂಧಿಸಿದ್ದು, ದಾಳಿಗೆ ಬಳಸಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.



Join Whatsapp