8 ಲಕ್ಷದ 17 ಸಾವಿರ ಕಾರುಗಳನ್ನು ಮಾರುಕಟ್ಟೆಯಿಂದ ಹಿಂಪಡೆದ‌‌‌ ಟೆಸ್ಲಾ ಕಂಪನಿ !

Prasthutha|

ನ್ಯೂಯಾರ್ಕ್; ಕಾರು ಸ್ಟಾರ್ಟ್ ಮಾಡುವ ವೇಳೆ ಸೀಟ್ ಬೆಲ್ಟ್ ಧರಿಸುವಂತೆ ನೆನಪಿಸುವ ‘ಅಲರ್ಟ್ ಮೆಸೆಜ್’ ನೀಡುವಲ್ಲಿ ವಿಫಲವಾಗುತ್ತಿರುವ 8 ಲಕ್ಷದ 17 ಸಾವಿರ ಕಾರುಗಳನ್ನು ಅಮೆರಿಕದ ಮಾರುಕಟ್ಟೆಯಿಂದ ಹಿಂಪಡೆಯುತ್ತಿರುವುದಾಗಿ ಖ್ಯಾತ ಇಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿಯಾಗದ ಟೆಸ್ಲಾ ತಿಳಿಸಿದೆ.
2021-2022 ಮಾಡೆಲ್ S ಹಾಗೂ ಮಾಡೆಲ್ X, 2017-2022 ಮಾಡೆಲ್ Y ಕಾರುಗಳು, ಫೆಡರಲ್ ಮೋಟಾರು ವಾಹನ ಸುರಕ್ಷತಾ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂದು ಅಮೇರಿಕಾದ ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷತೆ ಆಡಳಿತ [NHTSA] ಅಧಿಕಾರಿಗಳು ಹೇಳಿಕೆ ಬಿಡುಗಡೆ ಮಾಡಿದ ಬೆನ್ನಲ್ಲೇ, ಸಮಸ್ಯೆ ಇರುವ ಎಲ್ಲಾ ಕಾರುಗಳನ್ನು ವಾಪಾಸ್ ಕರೆಸಿಕೊಳ್ಳಲು ಟೆಸ್ಲಾ ನಿರ್ಧರಿಸಿದೆ. ಅದಾಗಿಯೂ ಈ ತಾಂತ್ರಿಕ ಸಮಸ್ಯೆಯಿಂದಾಗಿ ಇದುವರೆಗೂ ಯಾವುದೇ ಅಪಘಾತಗಳು ಸಂಭವಿಸಿಲ್ಲ ಎಂದು ಟೆಸ್ಲಾ ಕಂಪನಿಯು NHTSAಗೆ ತಿಳಿಸಿದೆ.

- Advertisement -

ವಾರದಲ್ಲಿ ಎರಡನೇ ನಿರ್ಧಾರ !

ಒಂದು ವಾರದಲ್ಲಿ ಟೆಸ್ಲಾ ಎರಡನೇ ಬಾರಿಗೆ ಕಾರುಗಳನ್ನು ವಾಪಾಸ್ ಪಡೆದುಕೊಳ್ಳುವ ನಿರ್ಧಾರ ಘೋಷಿಸಿದೆ. ಪೂರ್ಣ ಸ್ಬಯಂ‌ಚಾಲನೆಯ [ ಬೆಟಾ] ವಾಹನಗಳು ನಿಲ್ಲಿಸುವ ಸೂಚನೆ ಇರುವ ಸ್ಥಳಗಳಲ್ಲಿ ನಿಲ್ಲುತ್ತಿಲ್ಲ ಎಂಬ ದೂರಿನ ಮೇರೆಗೆ ಕಳೆದ ಮಂಗಳವಾರವಷ್ಟೇ ನಿರ್ದಿಷ್ಟ ಮಾದರಿಯ 54 ಸಾವಿರಕ್ಕೂ ಅಧಿಕ ಕಾರುಗಳನ್ನು ಟೆಸ್ಲಾ ಮಾರುಕಟ್ಟೆಯಿಂದ ಹಿಂತೆಗೆದುಕೊಂಡಿತ್ತು.



Join Whatsapp