ಸರ್ವಾಧಿಕಾರಿ ರಾಜ ಯಾರ ಮಾತನ್ನೂ ಕೇಳುವುದಿಲ್ಲ: ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

Prasthutha|

ನವದೆಹಲಿ: ಸಂಸತ್ ಅಧಿವೇಶನದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ದೇಶದಲ್ಲಿ ಎಲ್ಲಾ ಸಂಸ್ಥೆಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ವಾಧಿಕಾರಿ ರಾಜ ಯಾರ ಮಾತನ್ನೂ ಕೇಳುವುದಿಲ್ಲವೋ ಅಂತೆಯೇ ಪ್ರಧಾನಿ ನರೇಂದ್ರ ಮೋದಿ ಕೂಡ ಯಾರ ಮಾತನ್ನು ಕೇಳುತ್ತಿಲ್ಲ ಎಂದು ವ್ಯಂಗ್ಯವಾಡಿದರು.

- Advertisement -

ಭಾರತದ ಆಡಳಿತ ವ್ಯವಸ್ಥೆಯಲ್ಲಿ ಎರಡು ಆಯಾಮಗಳಿವೆ. ಮೊದಲನೆಯದ್ದು, ಭಾರತ ಒಕ್ಕೂಟ ವ್ಯವಸ್ಥೆಯಾಗಿದ್ದು, ಸಾಮ್ರಾಜ್ಯಶಾಹಿತ್ವಕ್ಕೆ ಇಲ್ಲಿ ಅವಕಾಶವಿಲ್ಲ. ಚುನಾಯಿತ ಕೆಂದ್ರ ಸರ್ಕಾರ ಭಾರತದ ರಾಜ್ಯಗಳ ಮೇಲಿನ ಹಿಡಿತವಿರುವುದಿಲ್ಲ. ಮೂರು ಸಾವಿರ ವರ್ಷಗಳ ಭಾರತದ ಇತಿಹಾಸದಲ್ಲಿ ಎಂದಿಗೂ ಈ ರೀತಿ ಮಾಡಲಾಗಿಲ್ಲ. ಎರಡನೆಯದ್ದು ಲಾಠಿ ಮೂಲಕ ಆಳ್ವಿಕೆ ನಡೆಸುವುದು. ಇದು ಕೇಂದೀಕೃತ ಸರ್ವಾಧಿಕಾರ ಆಡಳಿತವನ್ನು ಬಿಜೆಪಿ ಸರ್ಕಾರ ನಿರ್ವಹಿಸುತ್ತಿದೆ. ಎಲ್ಲಾ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.

“ನ್ಯಾಯಾಂಗ, ಚುನಾವಣಾ ಆಯೋಗ, ಪೆಗಾಸಸ್, ಇವೆಲ್ಲವೂ ರಾಜ್ಯಗಳ ಒಕ್ಕೂಟದ ಧ್ವನಿಯನ್ನು ನಾಶಮಾಡುವ ಸಾಧನಗಳಾಗಿವೆ” ಎಂದು ರಾಹುಲ್ ಗಾಂಧಿ ತಿಳಿಸಿದರು.



Join Whatsapp