ಮಂಗಳೂರು: ನಗರದ ಖಾಸಗಿ ಕಾಲೇಜಿನಲ್ಲಿ ತಲವಾರು ಹಿಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬರ್ಕೆ ಪೋಲೀಸರು ಬಂಧಿಸಿದ್ದಾರೆ.
ವಿವೇಕ ನಗರ ನಿವಾಸಿ ವಿಶ್ವನಾಥ್ ಬಂಧಿತ ಆರೋಪಿ ಎಂದು ಗುರುತಿಸಿಲಾಗಿದೆ.
ಕರ್ನಾಟಕ ಮೂಲದ ವಿದ್ಯಾರ್ಥಿಯೊಬ್ಬನ ಸ್ಕೂಟರ್ ಕೇರಳ ಮೂಲದ ವಿದ್ಯಾರ್ಥಿಗೆ ಗುದ್ದಿರುವ ಹಿನ್ನೆಲೆ ಪರಸ್ಪರರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಇದನ್ನೇ ನೆಪವಾಗಿರಿಸಿ ಕ್ಷುಲ್ಲಕ ಕಾರಣಕ್ಕೆ ತಲ್ವಾರ್ ಹಿಡಿದು ಕರ್ನಾಟಕದ ವಿದ್ಯಾರ್ಥಿಗಳು ಕ್ಯಾಂಪಸ್ ಪ್ರವೇಶಿಸಿದ್ದಾರೆ. ತಲ್ವಾರ್ ಹಿಡಿದ ದೃಶ್ಯವು ಮೊಬೈಲ್ ನಲ್ಲಿ ಸೆರೆಯಾಗಿದೆ.
ಈ ಬಗ್ಗೆ ಬರ್ಕೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ವೀಡಿಯೋ ಆಧಾರದಲ್ಲಿ ಓರ್ವನನ್ನು ಪೋಲೀಸರು ಬಂಧಿಸಿದ್ದಾರೆ.