ವಿವಾದಕ್ಕೆ ಕಾರಣವಾಗಿದ್ದ ಜಿನ್ನಾ ಟವರ್‌ಗೆ ತ್ರಿವರ್ಣ ಬಣ್ಣ ಹಚ್ಚಿದ ಶಾಸಕ ಮುಸ್ತಫ

Prasthutha|

ಅಮರಾವತಿ: ಆಂಧ್ರಪ್ರದೇಶದ ಗುಂಟೂರಿನ ಜಿನ್ನಾ ಟವರ್‌ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಇಲ್ಲಿ ತ್ರಿವರ್ಣ ಧ್ವಜದ ಬಣ್ಣ ಬಳಿಯಲಾಗಿದ್ದು ಗುರುವಾರವೇ ಧ್ವಜಾರೋಹಣ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆಂಧ್ರದ ಆಡಳಿತ ಪಕ್ಷ ವೈಎಸ್ಆರ್ಸಿಪಿ ಯ ಶಾಸಕ ಮುಸ್ತಫಾ ಅವರು ಖುದ್ದಾಗಿ ನಿಂತು ಸಂಪೂರ್ಣ ಟವರ್ ಗೆ ಪೇಂಟಿಂಗ್ ಮಾಡಿಸಿದ್ದಾರೆ.

- Advertisement -

ಪಾಕಿಸ್ತಾನ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಹೆಸರಿನ ಬದಲಿಗೆ ನಮ್ಮ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅಥವಾ ದಲಿತ ಕವಿ ಗುರಾಮ್ ಜಶುವಾ ಹೆಸರಿಡಬೇಕು ಎಂಬ ಕೂಗು ಜೋರಾಗುತ್ತಿದೆ. ಇದರ ನಡುವೆಯೇ ಇದೇ 26ರ ಗಣರಾಜ್ಯೋತ್ಸವದ ದಿನ ಈ ಟವರ್ ಬಳಿ ಹಿಂದೂ ವಾಹಿನಿ ಕಾರ್ಯಕರ್ತರು ತ್ರಿವರ್ಣ ಧ್ವಜ ಹಾರಿಸಲು ಪಯತ್ನ ಪಟ್ಟಿದ್ದರು. ಆಂಧ್ರ ಪ್ರದೇಶದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು ಜಿನ್ನಾ ಟವರ್ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಪಾಕಿಸ್ತಾನದ ರಾಷ್ಟ್ರಪಿತ ಜಿನ್ನಾ ಹೆಸರು ಭಾರತದಲ್ಲಿ ಟವರ್‌ವೊಂದಕ್ಕೆ ಇಡಲಾಗಿದೆ. ಹೆಸರು ಬದಲಾವಣೆ ಮಾಡಿ, ನೀವು ಮಾಡಿಲ್ಲ ಎಂದರೆ ಅಧಿಕಾರಕ್ಕೆ ಬಂದ ಕೂಡಲೇ ನಾವು ಹೆಸರು ಬದಲಾಯಿಸುತ್ತೇವೆ. ಇಲ್ಲ ಟವರ್ ಧ್ವಂಸ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ರಾಜ್ಯ ಸರ್ಕಾರಕ್ಕೆ ಬೆದರಿಕೆ ಹಾಕಿದ್ದರು.

‘ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಲು ಹಲವು ಮುಸ್ಲಿಂ ಮುಖಂಡರೂ ಹೋರಾಡಿದ್ದಾರೆ. ಆದರೆ ಸ್ವಾತಂತ್ರ್ಯ ಬಂದ ನಂತರ ಅದೆಷ್ಟೋ ಜನರು ಪಾಕಿಸ್ತಾನಕ್ಕೆ ಹೋಗಿ ನೆಲೆಸಿದರು. ನಾವು ಭಾರತೀಯರಾಗಿ ಇಲ್ಲಿಯೇ ಜೀವನ ನಡೆಸುತ್ತಿದ್ದೇವೆ. ನಮ್ಮ ತಾಯ್ನಾಡಾದ ಭಾರತದ ಬಗ್ಗೆ ನಮಗೂ ಅಪಾರ ಪ್ರೀತಿ-ಗೌರವ ಇದೆ’ ಎಂದು ಶಾಸಕ ಮುಸ್ತಫಾ ಹೇಳಿದ್ದಾರೆ.



Join Whatsapp