ಬಜೆಟ್ ಮಂಡನೆಗೂ ಮುನ್ನವೇ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ

Prasthutha|

ನವದೆಹಲಿ: ಕೇಂದ್ರ ಬಜೆಟ್​ ಮಂಡನೆಗೆ ಮುಂಚೆಯೇ ವಾಣಿಜ್ಯ ಬಳಕೆಯ ಎಲ್​​ಪಿಜಿ ಸಿಲಿಂಡರಿನ ಬೆಲೆಯಲ್ಲಿ ಇಳಿಕೆಯಾಗಿದೆ. ಮಂಗಳವಾರ ರಾಷ್ಟ್ರದ ಆಯಿಲ್​ ಮಾರ್ಕೆಟಿಂಗ್​ ಕಂಪನಿಗಳು ಎಲ್​ಪಿಜಿ ಸಿಲಿಂಡರ್​ ಬೆಲೆಯ ಪಟ್ಟಿಯನ್ನು ಬಿಡುಗಡೆ ಮಾಡಿವೆ.

- Advertisement -

ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಕೆಲವು ಬೆಲೆಯಲ್ಲಿ ಕಡಿತಗೊಳಿಸಲು ನಿರ್ಧರಿಸಿದೆ. ಇಂದು ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರಿನ ಬೆಲೆಯಲ್ಲಿ ಬರೋಬ್ಬರಿ 91.50 ರೂಪಾಯಿ ಇಳಿಕೆ ಕಂಡಿದೆ. ಇದರಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ಸಿಲಿಂಡರಿನ ಬೆಲೆ 1907 ರೂಪಾಯಿ ಆಗಲಿದೆ.

14 ಕೆಜಿಯ ಗೃಹಬಳಕೆಯ ಎಲ್​ಪಿಜಿ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ನಿರಂತರ ದರ ಏರಿಕೆಯಿಂದ ಕಂಗಾಲಾಗಿರುವ ಗ್ರಾಹಕರಿಗೆ ಇಂದಿನ ದರ ಇಳಿಕೆ ಸ್ವಲ್ಪ ಸಮಾಧಾನ ತಂದರೂ, ಇತ್ತೀಚಿನ ಭಾರೀ ಏರಿಕೆಗಳ ಮಧ್ಯೆ ಈ ದರ ಕಡಿತವು ಏನೂ ಸಾಲದು ಎಂದು ಗ್ರಾಹಕರು ಹೇಳುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ದರ ಇಳಿಕೆಯಾದರೆ ಒಳ್ಳೆಯದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.



Join Whatsapp