ಕೋಟ್ಟಯಂ: ಖ್ಯಾತ ಉರಗ ರಕ್ಷಕ ವಾವಾ ಸುರೇಶ್ ಅವರಿಗೆ ನಾಗರಹಾವು ಕಚ್ಚಿದ್ದು, ಸುರೇಶ್ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಕೊಟ್ಟಾಯಂನ ಕುರಿಚಿ ಎಂಬಲ್ಲಿ ನಾಗರಹಾವನ್ನು ಹಿಡಿದು ಗೊಣಿ ಚೀಲಕ್ಕೆ ತುಂಬಿಸುವ ವೇಳೆ ಈ ದುರ್ಘಟನೆ ನಡೆದದ್ದು, ನಾಗರ ಹಾವು ಅವರ ಬಲಗಾಲಿನ ತೊಡೆ ಭಾಗಕ್ಕೆ ಕಚ್ಚಿದೆ.
ಮೂರು ದಿನಗಳ ಹಿಂದೆ ಈ ಪ್ರದೇಶದಲ್ಲಿ ಹಾವು ಕಾಣಿಸಿಕೊಂಡಿದ್ದು ಸಾರ್ವಜನಿಕರು ಹಾವನ್ನು ಹಿಡಿಯಲು ವಾವಾ ಸುರೇಶ್ ಅವರನ್ನು ಕರೆಸಿದ್ದರು.
ಹಾವು ಕಚ್ಚಿದ ತಕ್ಷಣವೇ ಸುರೇಶ್ ಅವರನ್ನು ತಕ್ಷಣ ಹತ್ತಿರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊಟ್ಟಯಂನ ಖಾಸಗಿ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದೆ. ಈ ಹಿಂದೆಯೂ ಕೂಡ ವಾವಾ ಸುರೇಶ್ ಹಾವು ಕಡಿತಕ್ಕೊಳಗಾಗಿ ಎರಡು ಬಾರಿ ವೆಂಟಿಲೇಟರ್ನಲ್ಲಿದ್ದು, ಬದುಕುಳಿದಿದ್ದರು. ಸದ್ಯ ಅವರ ಸ್ಥಿತಿ ಗಂಭೀರವಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.