ಪೆಗಾಸೆಸ್ ಕಣ್ಗಾವಲು ಪ್ರಕರಣ । ಮೋದಿ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಕೋರಿ ಸುಪ್ರೀಮ್ ಗೆ ಅರ್ಜಿ

Prasthutha|

ನವದೆಹಲಿ: ಇಸ್ರೇಲ್ ಮೂಲದ ಪೆಗಾಸೆಸ್ ಸ್ಪೈವೇರ್ ಬಳಕೆ ಮಾಡಿರುವ ಆರೋಪದ ಕುರಿತು ನ್ಯೂಯಾರ್ಕ್ ಟೈಮ್ಸ್ ನಲ್ಲಿ ವರದಿ ಆಧರಿಸಿ ಈ ಹಗರಣದಲ್ಲಿ ಭಾಗಿಯಾದ ಪ್ರಧಾನಿ ಮೋದಿ, ಅಧಿಕಾರಿ ಅಥವಾ ಪ್ರಾಧಿಕಾರದ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಕೋರಿ ಸುಪ್ರೀಮ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

- Advertisement -

ಮಾತ್ರವಲ್ಲ 2017 ರಲ್ಲಿ ಇಸ್ರೇಲ್ ನೊಂದಿಗೆ ನಡೆದ ರಕ್ಷಣಾ ಒಪ್ಪಂದದ ಕುರಿತು ತನಿಖೆಗೆ ಆದೇಶಿಸುವಂತೆ ಈ ಅರ್ಜಿಯಲ್ಲಿ ಸುಪ್ರೀಮ್ ಕೋರ್ಟ್ ಗೆ ಮನವಿ ಮಾಡಿದೆ.

ಹಿರಿಯ ವಕೀಲ ಎಮ್.ಎಲ್. ಶರ್ಮಾ ಅವರು ಪೆಗಾಸೆಸ್ ವಿಚಾರವಾಗಿ ಸುಪ್ರೀಮ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಈ ವ್ಯವಹಾರದಲ್ಲಿ ಭಾಗಿಯಾದ ಪ್ರತಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಬೇಕು ಮತ್ತು ಈ ಹಗರಣದ ಕುರಿತು ತನಿಖೆ ಆರಂಭಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

- Advertisement -

ಪೆಗಾಸೆಸ್ ಪ್ರಕರಣದ ತನಿಖೆಗಾಗಿ ಪಶ್ಚಿಮ ಬಂಗಾಳ ಸರ್ಕಾರ ರಚಿಸಿದ್ದ ನ್ಯಾಯಮೂರ್ತಿ ಲೋಕೂರ್ ಆಯೋಗಕ್ಕೆ ಸುಪ್ರೀಮ್ ಕೋರ್ಟ್ ತಡೆ ನೀಡಿತ್ತು. ಪ್ರಸಕ್ತ ಆಯೋಗವು ಶಾಸನಬದ್ಧ ಸ್ವತಂತ್ರ ಸಂಸ್ಥೆಯಾಗಿದ್ದು, ಅದಕ್ಕೆ ಸರ್ಕಾರ ಆದೇಶ ನೀಡಲು ಸಾಧ್ಯವಿಲ್ಲ ಎಂದು ವಕೀಲರಾದ ಅಭಿಷೇಕ್ ಮನು ಸಿಂಘ್ವಿ ತಿಳಿಸಿದ್ದಾರೆ.



Join Whatsapp