ಮಂಗಳೂರು: “ಹುಲಿ ಬೇಟೆಗೆ ಹುಲಿ ಕಟ್ಟಬೇಕು, ಕುರಿಯನ್ನಲ್ಲ” ಎಂಬ ಸಿಎಂ ಇಬ್ರಾಹಿಂ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ವಿಧಾನಸಭೆ ಪ್ರತಿಪಕ್ಷ ಉಪನಾಯಕ ಯುಟಿ ಖಾದರ್, ಕುರಿ ಯಾರು, ಹುಲಿ ಯಾರು ಅಂತ ಗೊತ್ತಿಲ್ಲ. ನಾನಂತೂ ಹುಲಿಯೂ ಅಲ್ಲ, ಕುರಿಯೂ ಅಲ್ಲ. ನಾನು ಮನುಷ್ಯತ್ವ, ಮಾನವೀಯತೆ ಇರುವ ಸಾಮಾನ್ಯ ಮನುಷ್ಯ ಎಂದು ತಿರುಗೇಟು ನೀಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಇಬ್ರಾಹಿಂ ಪಕ್ಷದ ಹಿರಿಯ ನಾಯಕರು. ಅವರು ಪಕ್ಷ ಬಿಟ್ಟು ಹೋಗುವುದಿಲ್ಲ. ಅಹಿಂದ ಇರಲಿ, ಅಲಿಂಗ ಇರಲಿ ಅದೆಲ್ಲವೂ ಯೋಜನೆಗಳು ಕಾಂಗ್ರೆಸ್ ತತ್ವದಲ್ಲಿದೆ. ಎಸ್ ಎಂ ಕೃಷ್ಣ ಸಿಎಂ ಆಗಿದ್ದಾಗ 7 ಮಂದಿ, ಸಿದ್ದರಾಮಯ್ಯ ಅವಧಿಯಲ್ಲಿ 4 ಮಂದಿ ಮುಸ್ಲಿಮ್ ಸಚಿವರಿದ್ದರು. ನಮ್ಮಲ್ಲಿ ಗುಂಪುಗಾರಿಕೆ ಇಲ್ಲ.ಬಿಜೆಪಿ ದೂರ ಇಡುವುದು ನಮ್ಮ ಗುರಿ ಎಂದು ಹೇಳಿದರು.