2024 ರ ಚುನಾವಣೆಗೆ ಮುನ್ನ ಇನ್ನಷ್ಟು ಸ್ಪೈವೇರ್ ಹಗರಣ ಬಹಿರಂಗ: ಪಿ.ಚಿದಂಬರಮ್

Prasthutha|

ನವದೆಹಲಿ: ಅಮೆರಿಕ ಮೂಲದ ನ್ಯೂಯಾರ್ಕ್ ಟೈಮ್ಸ್ ಪೆಗಾಸೆಸ್ ಸ್ಪೈವೇರ್ ಕುರಿತ ವರದಿ ಬಹಿರಂಗವಾಗುತ್ತಿದ್ದಂತೆ ಈ ಹಗರಣದ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ, 2024 ರ ಸಾರ್ವತ್ರಿಕ ಚುನಾವಣೆಗೂ ಮೊದಲು ಇನ್ನಷ್ಟು ಸ್ಪೈವೇರ್ ಹಗರಣ ಬಹಿರಂಗವಾಗಲಿದೆ ಎಂದು ಕೇಂದ್ರ ಸರ್ಕಾರವನ್ನು ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.

- Advertisement -

ಈ ವಾರದ ಆರಂಭದಲ್ಲಿ ನ್ಯೂಯಾರ್ಕ್ ಟೈಮ್ಸ್, ಪೆಗಾಸೆಸ್ ಸ್ಪೈವೇರ್ ಮತ್ತು ಕ್ಷಿಪಣಿ ವ್ಯವಸ್ಥೆಯ ಕುರಿತು 2017 ರಲ್ಲಿ ಸುಮಾರು 2 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಭಾರತ ಮತ್ತು ಇಸ್ರೇಲ್ ನಡುವಿನ ಅತ್ಯಾಧುನಿಕ ಶಸ್ತ್ರಾಸ್ತ್ರ ಮತ್ತು ಗುಪ್ತಚರ ಸಾಧನ ಸಂಬಂಧಿಸಿದಂತೆ ಸಹಿಮಾಡಿದೆ ಎಂದು ವರದಿ ಮಾಡಿತ್ತು.

ಈ ಹಿಂದೆ ಭಾರತ ಸುಮಾರು 2 ಬಿಲಿಯನ್ ಒಪ್ಪಂದಕ್ಕೆ ಸಹಿ ಮಾಡಿತ್ತು. ಭಾರತ ಭವಿಷ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬಹುದು. 2024 ಕ್ಕೆ ಮುಂಚಿತವಾಗಿ ಕಳೆದ ಸಲಕ್ಕಿಂತ ಹೆಚ್ಚು ಅತ್ಯಾಧುನಿಕ ಸ್ಪೈವೇರ್ ಅನ್ನು ಗಳಿಸಿದರೆ ನಾವು ಅವರಿಗೆ ಸುಮಾರು ನಾಲ್ಕು ಬಿಲಿಯನ್ ಡಾಲರ್ ನೀಡಬಹುದು ಎಂದು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

- Advertisement -

ಇನ್ನೊಂದು ಟ್ವೀಟ್ ನಲ್ಲಿ ಅವರು ಪ್ರತಿಕ್ರಿಯಿಸುತ್ತಾ, ಭಾರತ – ಇಸ್ರೇಲ್ ಸಂಬಂಧದಲ್ಲಿ ಹೊಸ ಗುರಿಯನ್ನು ಹೊಂದಲು ಇದು ಅತ್ಯುತ್ತಮ ಸಮಯ ಎಂದು ಪ್ರಧಾನಿ ತಿಳಿಸಿದ್ದಾರೆ. ಖಂಡಿತವಾಗಿಯೂ, ಪೆಗಾಸೆಸ್ ಸ್ಪೈವೇರ್ ಗಿಂತ ಸುಧಾರಿತ ಆವೃತ್ತಿಯನ್ನು ಹೊಂದುವುದು ಇಸ್ರೇಲ್ ಪಾಲಿಗೆ ಅತ್ಯುತ್ತಮ ಸಮಯ ಎಂದು ಅವರು ಮೋದಿ ಸರ್ಕಾರವನ್ನು ಛೇಡಿಸಿದರು.



Join Whatsapp