ಉತ್ತರ ಪ್ರದೇಶದಲ್ಲಿ ರೈತರು ಬಿಜೆಪಿಯನ್ನು ತಿರಸ್ಕರಿಸಲಿದ್ದಾರೆ: ಅಖಿಲೇಶ್ ಯಾದವ್

Prasthutha|

ಲಕ್ನೋ: ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ರೈತರು ಆದಿತ್ಯನಾಥ್ ಸರ್ಕಾರವನ್ನು ತಿರಸ್ಕರಿಸಲಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ತಿಳಿಸಿದ್ದಾರೆ.

- Advertisement -

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರೈತರ ಆದಾಯವನ್ನು ದ್ವಿಗುಣಗೊಳಿಸುವ ಮತ್ತು ಯುವಕರಿಗೆ ಉದ್ಯೋಗ ಒದಗಿಸುವ ತನ್ನ ಭರವಸೆಯನ್ನು ಈಡೇರಿಸದ ಸರ್ಕಾರದ ನಡೆಯನ್ನು ಟೀಕಿಸಿದರು.

ಬಿಜೆಪಿಯವರು ಈ ಹಿಂದೆ ರಾಜ್ಯದ ರೈತರ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆ ಮತ್ತು ಅವಮಾನಿಸಿದ್ದಾರೆ. ಸರ್ಕಾರದ ಈ ರೀತಿಯ ಅಮಾನವೀಯ ನಡೆಯಿಂದಾಗಿ ಅನೇಕರು ಕೊಲ್ಲಲ್ಪಟ್ಟಿದ್ದಾರೆ. ಬಿಜೆಪಿ ನಾಯಕರು ರೈತರನ್ನು ಮುಂದೊಂದು ದಿನ ಜೀಪು ಹತ್ತಿಸಿ ಸಾಯಿಸಿದರೂ ಅಚ್ಚರಿಯಿಲ್ಲ ಎಂದಿದ್ದಾರೆ. ಮಾತ್ರವಲ್ಲ ಈ ಹಿಂದೆ ಬಿಜೆಪಿಯವರು ರೈತರನ್ನು ಭಯೋತ್ಪಾದಕರು ಮತ್ತು ಗೂಂಡಾಗಳು ಎಂದು ಕರೆದಿದ್ದನ್ನು ಅಖಿಲೇಶ್ ಯಾದವ್ ಮಾಧ್ಯಮಗಳ ಮೂಲಕ ನೆನಪಿಸಿದರು.



Join Whatsapp