‘ನಿಯೋಕೊವ್’ಗೆ ಹೆದರಲೇಬೇಡಿ, ಇದು ಹೊಸತೂ ಅಲ್ಲ!

Prasthutha|

ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಸ್ವಲ್ಪ ಮಟ್ಟಿಗೆ ಇಳಿಮುಖವಾಗುತ್ತಿರುವ ಬೆನ್ನಲ್ಲೇ ಕೊರೊನಾದ ಇನ್ನೊಂದು ರೂಪಾಂತರಿ ಕಾಲಿಟ್ಟಿದ್ದಾಗಿ ವರದಿಯಾಗಿದ್ದು, ಮಾದ್ಯಮಗಳು ತಪ್ಪಾಗಿ ಮಾಹಿತಿ ನೀಡಿ ಜನರನ್ನು ಹೆದರಿಸುತ್ತಿದೆ. ಈ ರೂಪಾಂತರಿಯ ಹೆಸರು ನಿಯೋಕೊವ್. ಇದು ಅದೆಷ್ಟರ ಮಟ್ಟಿಗೆ ಸಂಚಲನ ಮೂಡಿಸಿದೆ ಎಂದರೆ, ಅದರ ಹೆಸರು ಹೊರಬಿದ್ದಾಗಿನಿಂದ ಸುಮಾರು 5 ಲಕ್ಷಕ್ಕೂ ಹೆಚ್ಚು ಮಂದಿ ನಿಯೋಕೊವ್ ಕುರಿತು ಗೂಗಲ್ ಮತ್ತಿತರ ಆನ್ಲೈನ್ ಆ್ಯಪ್ಗಳಲ್ಲಿ ಸರ್ಚ್ ಮಾಡಿದ್ದಾರೆ.

- Advertisement -

ಆದರೆ ನಿಯೋಕೊವ್ ಗೆ ಹೆದರಬೇಕಿಲ್ಲ ಎಂದು ಸಂದೇಶವನ್ನು ಇಂಡಿಯಾ ಟುಡೆ ನೀಡಿದೆ. ಕೆಲವು ವೈದ್ಯಕೀಯ ತಜ್ಞರು, ಆರೋಗ್ಯ ಕ್ಷೇತ್ರದ ಸ್ಪೆಶಲಿಸ್ಟ್ಗಳ ಟ್ವೀಟ್ಗಳು, ಹೇಳಿಕೆಗಳನ್ನು ಉಲ್ಲೇಖ ಮಾಡಿದ ಅದರ ವರದಿಯು ನಿಯೋಕೊವ್ ಕೊವಿಡ್ 19ನ ಹೊಸ ತಳಿಯೇ ಅಲ್ಲ, ಇದು ಜಗತ್ತಿಗೆ ಹೊಸ ವೈರಸ್ ಕೂಡ ಅಲ್ಲವೆಂದು ಸ್ಪಷ್ಟವಾಗಿ ತಿಳಿಸಿದೆ.

ನಿಯೋಕೊವ್ ಬಗ್ಗೆ ಕೆಲವರು ತಜ್ಞರು ಅಧ್ಯಯನ ಮಾಡಿದ್ದು, ಆ ಪ್ರಕಾರ ಇದು ಕೊರೊನಾದ ಇನ್ನೊಂದು ತಳಿ ಅಲ್ಲ. ಬದಲಿಗೆ ನಿಯೋಕೊವ್ ಎಂಬುದು ಮರ್ಸ್-ಕೊವ್ ವೈರಸಿನ ತಳಿಯಾಗಿದೆ. ಇದುವರೆಗೆ ಕೇವಲ ಬಾವಲಿಗಳಲ್ಲಿ ಮಾತ್ರ ಪತ್ತೆಯಾಗಿದ್ದು, ಮನುಷ್ಯರಲ್ಲಿ ಕಂಡುಬಂದಿಲ್ಲ. ಇದು 2010ರ ಸಮಯದಲ್ಲೇ ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ದಕ್ಷಿಣ ಕೊರಿಯಾಗಳಲ್ಲಿ ಕಾಣಿಸಿಕೊಂಡಿತ್ತು. 2013ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಕೂಡ ಬಾವಲಿಗಳಲ್ಲಿ ಈ ವೈರಸ್ ಕಾಣಿಸಿಕೊಂಡಿತ್ತು. ಇದು ಮನುಷ್ಯರಿಗೆ ತಗುಲುವುದಿಲ್ಲ. ಯಾರನ್ನೂ ಕೊಲ್ಲುವುದಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದನ್ನು ಇಂಡಿಯಾ ಟುಡೆ ತಿಳಿಸಿದೆ.



Join Whatsapp