ಕೊರೊನಾ ವೈರಸ್’ನ‌ ಹೊಸ ರೂಪಾಂತರ NeoCov ! ಮೂವರು ಸೋಂಕಿತರಲ್ಲಿ ಓರ್ವ ಸಾವು ಎಂದ ವಿಜ್ಞಾನಿಗಳು !

Prasthutha|

ನವದೆಹಲಿ; 2019ರಲ್ಲಿ ಚೀನಾದ ವುಹಾನ್​ನಲ್ಲಿ ಮೊಟ್ಟ ಮೊದಲ ಬಾರಿಗೆ ಪತ್ತೆಯಾದ ಕೊರೊನಾ ವೈರಸ್, ಬೇರೆ ಬೇರೆ ರೂಪಾಂತರದಲ್ಲಿ‌ ಜಗತ್ತಿನಾದ್ಯಂತ ಭೀತಿ ಸೃಷ್ಟಿಸುತ್ತಿರುವಾಗಲೇ, ಮತ್ತೊಂದು ಮಾರಣಾಂತಿಕ ವೈರಸ್‌ ಕುರಿತು ವುಹಾನ್​ನ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

- Advertisement -

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಹೊಸ ರೀತಿಯ ಕೊರೊನಾ ವೈರಸ್​ NeoCov ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿರುವ ವಿಜ್ಞಾನಿಗಳು, NeoCov ಅತ್ಯಂತ ವೇಗವಾಗಿ ಹರಡುವುದು ಮಾತ್ರವಲ್ಲದೇ ಹೆಚ್ಚಿನ ಸಾವುಗಳನ್ನು ವರದಿ ಮಾಡಬಲ್ಲುದು ಎಂದಿದ್ದಾರೆ.

ಹೊಸ ಮಾದರಿಯ ಕೊರೊನಾ ವೈರಸ್​ NeoCov ನಿಂದ ಸೋಂಕಿಗೆ ಒಳಗಾದ ಪ್ರತಿ ಮೂವರಲ್ಲಿ ಓರ್ವರು ಸಾವನ್ನಪ್ಪುವ ಸಾಧ್ಯತೆ ಅಧಿಕವಾಗಿದೆ.

- Advertisement -

NeoCoV ದಕ್ಷಿಣ ಆಫ್ರಿಕಾದಲ್ಲಿ ಬಾವಲಿಗಳಲ್ಲಿ ಪತ್ತೆಯಾಗಿದೆ ಮತ್ತು ಈ ಪ್ರಾಣಿಗಳಲ್ಲಿ ಮಾತ್ರ ಹರಡುತ್ತದೆ ಎಂದು ಈ‌ಹಿಂದೆ ಭಾವಿಸಲಾಗಿತ್ತು. bioRxiv ವೆಬ್‌ಸೈಟ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನವು NeoCoV ಮಾನವರಲ್ಲೂ ಕಾಣಿಸುತ್ತದೆ ಎಂದು ಹೇಳಿದೆ.

ವುಹಾನ್ ವಿಶ್ವವಿದ್ಯಾನಿಲಯ ಮತ್ತು ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್‌ನ ಇನ್‌ಸ್ಟಿಟ್ಯೂಟ್ ಆಫ್ ಬಯೋಫಿಸಿಕ್ಸ್‌ನ ಸಂಶೋಧಕರ ಪ್ರಕಾರ, NeoCov ವೈರಸ್‌ಗೆ ಮಾನವ ಜೀವಕೋಶಗಳಿಗೆ ನುಸುಳಲು ಕೇವಲ ಒಂದು ರೂಪಾಂತರದ ಅಗತ್ಯವಿದೆ ಎಂದಿದ್ದಾರೆ



Join Whatsapp