ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ನ ಪದಾಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿರುವುದನ್ನು ಮನಗಂಡು 39 ಮಂದಿಗೆ ಪದೋನ್ನತಿ ನೀಡಲಾಗಿದೆ.
ಇಂಡಿಯನ್ ಯೂಥ್ ಕಾಂಗ್ರೆಸ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ಅನಿಲ್ ಯಾದವ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ನಾಲ್ವರಿಗೆ ಉಪಾಧ್ಯಕ್ಷ ಸ್ಥಾನ, ಒಂಭತ್ತು ಜನರಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಹಾಗೂ ಉಳಿದವರಿಗೆ ರಾಜ್ಯ ಕಾರ್ಯದರ್ಶಿಯಾಗಿ ಬಡ್ತಿ ನೀಡಲಾಗಿದೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಹಿರಿಯ ಮುಖಂಡ ರಾಹುಲ್ ಗಾಂಧಿ, ಐ.ವೈ.ಸಿ ಉಸ್ತುವಾರಿ ಕೃಷ್ಣ ಅಲ್ಲವರು ಮತ್ತು ಐ.ವೈ.ಸಿ. ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅವರ ನಾಯಕತ್ವದಲ್ಲಿ ಪಕ್ಷ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ವಿಶ್ವಾಸ ಹೊಂದಿರುವುದಾಗಿ ಅನಿಲ್ ಯಾದವ್ ತಿಳಿಸಿದ್ದಾರೆ.
ಪದೋನ್ನತಿ ಪಡೆದವರ ವಿವರ ಹೀಗಿದೆ
ರಾಜ್ಯ ಉಪಾಧ್ಯಕ್ಷರು
ವಿಶ್ವನಾಥ್, ಅಬ್ದುಲ್ ರಹಿಮಾನ್ ದೇಸಾಯಿ, ದೀಪಿಕಾ ರೆಡ್ಡಿ, ಸಿರಿಲ್ ಪ್ರಭು
ರಾಜ್ಯ ಪ್ರಧಾನ ಕಾರ್ಯದರ್ಶಿಗಳು
ದಿವ್ಯಾ ಆರ್.ಕೆ., ರಷ್ಮಿ ಶಿವಕುಮಾರ್, ಜ್ಯೋತಿಷ್ ಎಚ್.ಎಂ, ಆಶಿಕ್ ಗೌಡ, ಮನ್ನಾರ್ ಮಣ್ಣನ್, ಚೇತನ್ ಗೌಡ, ಶ್ರೀಜಿತ್, ಯೆಲಪ್ಪ ಶಿಂಗೆ, ಐಶ್ವರ್ಯ ಮಹಾದೇವ
ರಾಜ್ಯ ಕಾರ್ಯದರ್ಶಿ
ಬಾಬು ಗವಳಿ, ಜರ್ಮೈನ್ ಜೂಲಿವಾ, ಮಲ್ಲೇಶ್, ಮಂಜು ನೆಲಗುಂದ್, ಮಂಜುನಾಥ್ ಕರ್ಬರ್ ಮಠ, ಮೊಹಮ್ಮದ್ ಅಜರ್, ಮೋಹನ್, ಮೊಯೀನ್ ಅಹಮದ್ ಶೇಕ್, ನಾಗಭೂಷಣ ರೆಡ್ಡಿ, ನಾಸಿರ್ ಅಹಮದ್ ಸಾಮನಿಗೆ, ನವೀನ್ ಕುಮಾರ್ ಬಿ.ಎಂ, ಪರೋಮಿತಾ ದಾಸ್, ಪ್ರಜ್ವಲ್, ರಾಮಕೃಷ್ಣ ರೊಳ್ಳಿ, ರಂಜಿತ್ ಶ್ರೀನಿವಾಸ್ ಮೂರ್ತಿ, ಸಯ್ಯದ್ ಕೈಜರ್, ಶಶಾಂಕ್ ರೇವಣ್ಣ, ಶೀತಲ್ ಮಠಪತಿ, ಸೂರಜ್ ನಾಯ್ಕ್, ಯಶ್ವಂತ್ ಗೌಡ, ಜಬೀವುಲ್ಲಾ, ದೀಪಕ್ ಭಾವಸಾರ್ ಸಿ.ಎಸ್, ಸ್ಕರಿಯಾ ಜಾನ್, ಸಿಮೋನಾ ಮೋಹನ್, ಮೋಶಿನ್ ಖಾನ್ ಚರಿತ ಕೊಂಕಲ್