ತ್ರಿಪುರಾದಲ್ಲಿ 100ಕ್ಕೂ ಅಧಿಕ ವಲಸೆ ಹಕ್ಕಿಗಳ ಮೃತದೇಹ ಪತ್ತೆ

Prasthutha|

- Advertisement -

ಅಗರ್ತಲಾ: ವಲಸೆ ಹಕ್ಕಿಗಳ ನೆಚ್ಚಿನ ತಾಣವಾಗಿರುವ ತ್ರಿಪುರಾದಲ್ಲಿ 100ಕ್ಕೂ ಹೆಚ್ಚು ಅಪರೂಪದ ವಲಸೆ ಹಕ್ಕಿಗಳ ಮೃತದೇಹ ಪತ್ತೆಯಾಗಿದೆ.

ತ್ರಿಪುರಾದ ಗೋಮತಿ ಜಿಲ್ಲೆಯ ಖಿಲ್ಪಾರಾ ಪ್ರದೇಶದ ಸುಖಸಾಗರ್ ಸರೋವರದ ಬಳಿ ಹಕ್ಕಿಗಳ ಶವ ನಿಗೂಢ ರೀತಿಯಲ್ಲಿ ಪತ್ತೆಯಾಗಿದ್ದು, ಡಿಎಫ್ಒ ಮಹೇಂದ್ರ ಸಿಂಗ್ ನೇತೃತ್ವದ ಅರಣ್ಯಾಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ.

- Advertisement -

ಕಳೆದ ಏಳು ವರ್ಷಗಳಿಂದ ಚಳಿಗಾಲದಲ್ಲಿ ಕ್ಯಾಲಿಫೋರ್ನಿಯಾದಿಂದ ಉದಯಪುರಕ್ಕೆ ಪಕ್ಷಿಗಳು ವಲಸೆ ಬರುತ್ತಿವೆ. ಕ್ಯಾಲಿಫೋರ್ನಿಯಾದ ಹವಾಮಾನದಲ್ಲಿನ ಬದಲಾವಣೆಗಳೇ ಹಕ್ಕಿಗಳ ವಲಸೆಗೆ ಕಾರಣ ಎನ್ನಲಾಗಿದೆ.

ತ್ರಿಪುರಾದ ಜೀವವೈವಿಧ್ಯವು ವಲಸೆ ಹಕ್ಕಿಗಳಿಗೆ ಒಂದು ಆಕರ್ಷಣೆಯಾಗಿದೆ. ಅನೇಕ ವಲಸೆ ಹಕ್ಕಿಗಳು ಚಳಿಗಾಲದಲ್ಲಿ ತ್ರಿಪುರಾಕ್ಕೆ ಭೇಟಿ ನೀಡುತ್ತವೆ.



Join Whatsapp