ಬೆಂಗಳೂರು: ರವಿಶಂಕರ್ ಗುರೂಜಿ ಆಯುರ್ವೇದಿಕ್ ಕಾರ್ಖಾನೆಯ ಪ್ರೊಡೆಕ್ಷನ್ ಮ್ಯಾನೇಜರ್ ಈಶ್ವರ್ ಕುಮಾರ್ ಅವರು ಕಗ್ಗಲಿಪುರದ ಬಿಗ್ರೇಡ್ ಮೆಡೋಸ್ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬಿಗ್ರೇಡ್ ಮೆಡೋಸ್ ಅಪಾರ್ಟ್ ಮೆಂಟ್ ನ ಫ್ಲಾಟ್ ನಂ 102 ರಲ್ಲಿ ವಾಸಿಸುತ್ತಿದ್ದ ಈಶ್ವರ್ ಕುಮಾರ್ 13 ಪುಟಗಳ ಡೆತ್ ನೋಟ್ ಬರೆದಿಟ್ಟು, ಕಳೆದ ಜ. 20 ರಂದು ನೇಣಿಗೆ ಶರಣಾಗಿದ್ದಾರೆ.
ಈಶ್ವರ್ ಕುಮಾರ್ ಅವರು ರವಿಶಂಕರ್ ಗುರೂಜಿ ಆಯುರ್ವೇದಿಕ್ ಕಾರ್ಖಾನೆಯಲ್ಲಿ ಪ್ರೊಡೆಕ್ಷನ್ ಮ್ಯಾನೇಜರ್ ಆಗಿ ಹಲವು ತಿಂಗಳಿಂದ ಕೆಲಸ ನಿರ್ವಹಿಸುತ್ತಿದ್ದರು. ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ನಡುವೆ ಈಶ್ವರ್ ಕುಮಾರ್ ಅತ್ಮಹತ್ಯೆಗೆ ಎಸಿಪಿ ಹಾಕಿದ್ದ ಬೆದರಿಕೆ ಕಾರಣವೆಂದು ಮೃತನ ಸಹೋದರ ರೇವಣ ಸಿದ್ದೇಶ್ವರ್ ಜಯನಗರ ಎಸಿಪಿ ಶ್ರೀನಿವಾಸ್ ವಿರುದ್ಧ ದೂರು ನೀಡಿದ್ದಾರೆ.
ಅಲ್ಲದೆ ಈಶ್ವರ್ ಕುಮಾರ್ ಅವರ ಪತ್ನಿ ರಶ್ಮಿ, ಅಕೆಯ ತಮ್ಮ ಬಸವರಾಜು, ತಂಗಿ ರೂಪಾ ಹಾಗೂ ಪಾವಿನ್ ವಿರುದ್ಧವೂ ದೂರು ನೀಡಿದ್ದಾರೆ. ಪತಿ ಈಶ್ವರ್ ಅವರಿಂದ ತನಗೆ ವಿಚ್ಛೇದನ ಕೊಡಿಸುವಂತೆ ರಶ್ಮಿ ಎಸಿಪಿ ಶ್ರೀನಿವಾಸ್ ಅವರ ಮೊರೆ ಹೋಗಿದ್ದರು. ಹೀಗಾಗಿ ಎಸಿಪಿ ಕಚೇರಿಗೆ ಈಶ್ವರ್ ಕುಮಾರ್ ಕರೆಸಿ ಮಾತುಕತೆ ನಡೆಸಿದ್ದರು. ನಂತರ ಸೀದಾ ಫ್ಲಾಟ್ ಗೆ ಬಂದು ಅವರು ನೇಣಿಗೆ ಶರಣಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ತಮ್ಮ ಸಹೋದರ ಈಶ್ವರ್ ಕುಮಾರ್ ಅವರು ಎಸಿಪಿ ಶ್ರೀನಿವಾಸ್, ಪತ್ನಿ ರಶ್ನಿ, ರಶ್ಮಿ ತಮ್ಮ ಬಸವರಾಜು, ತಂಗಿ ರೂಪ, ಪಾವಿನ್ ಒತ್ತಡ ಹಾಗೂ ಬೆದರಿಕೆಗೆ ನೊಂದು ಆತ್ಮಹತ್ಮೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಅನ್ವಯ ರಶ್ಮಿ, ಬಸವರಾಜು, ರೂಪ, ಪಾವಿನ್ ವಿರುದ್ದ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಸರ್ಕಾರದಿಂದ ಅನುಮತಿ ಪಡೆಯದ ಹಿನ್ನೆಲೆ ಎಸಿಪಿ ವಿರುದ್ದ ಇನ್ನೂ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.