ಸೇವೆಯಿಂದ ನಿವೃತ್ತಿ ಹೊಂದಿದ ‘ವಿರಾಟ್’!

Prasthutha|

ಹೊಸದಿಲ್ಲಿ: ರಾಷ್ಟ್ರಪತಿ ಅಂಗರಕ್ಷಕ ತಂಡದಲ್ಲಿದ್ದ ವಿರಾಟ್‍ ಎಂಬ ಹೆಸರಿನ ಕುದುರೆ ನಿವೃತ್ತಿ ಹೊಂದಿದೆ.  

- Advertisement -

ಗಣರಾಜ್ಯೋತ್ಸವ ದಿನದಂದು ನೀವೃತ್ತಿ ಹೊಂದಿದ ಈ ಕುದುರೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೀಳ್ಕೊಟ್ಟಿದ್ದಾರೆ.

ಗಣರಾಜ್ಯೋತ್ಸವ ಪರೇಡ್ ಮುಕ್ತಾಯವಾದ ಬಳಿಕ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರ ಅಂಗರಕ್ಷಕರು ಅವರನ್ನು ಮತ್ತೆ ರಾಷ್ಟ್ರಪತಿ ಭವನಕ್ಕೆ ಕರೆದೊಯ್ದರು. ಆದರೆ, ಎಲ್ಲರ ಗಮನ ಸೆಳೆದಿದ್ದು ಅಂಗರಕ್ಷಕ ತಂಡದಲ್ಲಿದ್ದ ವಿರಾಟ್ ಎಂಬ ವಿಶೇಷ ಕುದುರೆ.

- Advertisement -

ಗಣರಾಜ್ಯೋತ್ಸವ ಪರೇಡ್‍ಗಳಲ್ಲಿ 13 ಬಾರಿ ಭಾಗವಹಿಸಿದ್ದ ವಿರಾಟ್ ನನ್ನು ಜನವರಿ 15 ರಂದು ಸೇನಾ ದಿನದ ಹಿಂದಿನ ದಿನದಂದು ಸೇನಾ ಮುಖ್ಯಸ್ಥರು ಶ್ಲಾಘಿಸಿದ್ದರು. ಇದರಿಂದಾಗಿ  ಅಸಾಧಾರಣ ಸೇವೆ ಮತ್ತು ಸಾಮರ್ಥ್ಯಗಳಿಗಾಗಿ ಪ್ರಶಂಸೆಯನ್ನು ಪಡೆದ ಮೊದಲ ಕುದುರೆ ಎಂಬ ಹೆಗ್ಗಳಿಕೆಗೆ ವಿರಾಟ್ ಪಾತ್ರವಾಗಿದೆ.

ವೀಡಿಯೋ ವೀಕ್ಷಿಸಿ…

2003ರಲ್ಲಿ ಅಂಗರಕ್ಷಕ ತಂಡಕ್ಕೆ ಸೇರ್ಪಡೆಗೊಂಡಿದ್ದ ಹ್ಯಾನೋವೇರಿಯನ್ ತಳಿಯ ಈ ಕುದುರೆಯನ್ನು ರಾಷ್ಟ್ರಪತಿಗಳ ಅಂಗರಕ್ಷಕನ ಚಾರ್ಜರ್ ಎಂದೂ ಕರೆಯುತ್ತಾರೆ.



Join Whatsapp