ಬುಡಕಟ್ಟು ಯುವಕ ಮಧು ಹತ್ಯೆ| ಸಿಬಿಐ ತನಿಖೆಗೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಕುಟುಂಬ

Prasthutha|

ಕೊಚ್ಚಿ: ದೇಶದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ಕೇರಳದ ಅಟ್ಟಪ್ಪಾಡಿಯ ಬುಡಕಟ್ಟು ಜನಾಂಗದ ಮಧು ಎಂಬ ಯುವಕನ ಹತ್ಯೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಆಗ್ರಹಿಸಿ ಸಂತ್ರಸ್ತನ ಕುಟುಂಬ ಹೈಕೋರ್ಟ್ ಮೆಟ್ಟಿಲೇರಲಿದೆ.

- Advertisement -

ಹತ್ಯೆಯಲ್ಲಿ ಇನ್ನೂ ಹೆಚ್ಚಿನ ಆರೋಪಿಗಳಿಗೆ ರಕ್ಷಣೆ ನೀಡಲಾಗಿದೆ ಎಂದು ಆರೋಪಿಸಿರುವ ಕುಟುಂಬ ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಸರ್ಕಾರ ಮತ್ತು ವಿಶೇಷ ಸರ್ಕಾರಿ ಅಭಿಯೋಜಕರು ಪ್ರಕರಣದ ಪ್ರಗತಿಯನ್ನು ತಮಗೆ ತಿಳಿಸುತ್ತಿಲ್ಲ ಎಂದು ಮಧು ಸಹೋದರಿ ಸರಸು ಆರೋಪಿಸಿದ್ದಾರೆ.

- Advertisement -

ಕೇರಳ ಸೇರಿದಂತೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸುವಂತೆ 2018ರ ಫೆಬ್ರವರಿ 22ರಂದು ಬುಡಕಟ್ಟು ಜನಾಂಗದ ಯುವಕ ಮಧು ಎಂಬ ಯುವಕನನ್ನು ಕಳ್ಳತನ ಆರೋಪದಲ್ಲಿ ಗುಂಪೊಂದು ಕಟ್ಟಿಹಾಕಿ ಕ್ರೂರವಾಗಿ ಥಳಿಸಿ ಹತ್ಯೆಗೈದಿತ್ತು.



Join Whatsapp