ಚಿನ್ನದ ವ್ಯಾಪಾರಿ ಕೊಲೆ: ಇಬ್ಬರು ವಶಕ್ಕೆ

Prasthutha|

ಬೆಂಗಳೂರು: ಚಿನ್ನ ಖರೀದಿಗೆ ಹೋದ ವ್ಯಾಪಾರಿಯನ್ನು ಕೊಲೆಗೈದು ಮೃತದೇಹವನ್ನು ಮೂಟೆ ಕಟ್ಟಿ ಪುಟ್ಟೇನಹಳ್ಳಿ ಬಳಿಯ ಹೊನ್ನಾಪುರ ಕೆರೆಗೆ ಎಸೆದು ದುಷ್ಕರ್ಮಿಗಳು ಪರಾರಿಯಾಗಿರುವ ದುರ್ಘಟನೆ ನಡೆದಿದೆ.

- Advertisement -

ಬನಶಂಕರಿಯ ದಿವಾಕರ್ ಕೊಲೆಯಾದವರು. ದಿವಾಕರ್ ಚಿನ್ನ ತರುವುದಾಗಿ ಮನೆಯಿಂದ 5 ಲಕ್ಷ ಹಣ ತೆಗೆದುಕೊಂಡು ಹೋಗಿದ್ದರು. ಕಡಿಮೆ ಬೆಲೆಗೆ ಚಿನ್ನಾಭರಣ ಕೊಡುತ್ತೇವೆ ಎಂದು ಕರೆದ ದುಷ್ಕರ್ಮಿಗಳು ದಿವಾಕರ್ ತಲೆಗೆ ಬಡಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ.

ಬಳಿಕ ಯುವಕನ ಮೃತದೇಹವನ್ನು ಗೋಣಿಚೀಲದಲ್ಲಿ ಕಟ್ಟಿಕೊಂಡು ಬೈಕ್ ನಲ್ಲಿ ತೆಗೆದುಕೊಂಡು ಹೋಗಿ ಹೊನ್ನಾಪುರ ಕೆರೆಗೆ ಎಸೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

- Advertisement -

ಚಿನ್ನ ತರಲು ಹೋದ ಮಗ ನಾಪತ್ತೆಯಾಗಿದ್ದಾನೆ ಎಂದು ಪೋಷಕರು ದೂರು ದಾಖಲಿಸಿದ್ದಾರೆ. ನಾಪತ್ತೆ ದೂರು ದಾಖಲು ಮಾಡಿಕೊಂಡು ತನಿಖೆಗಿಳಿದ ಪೊಲೀಸರಿಗೆ ಹೊನ್ನಾಪುರ ಕೆರೆಯಲ್ಲಿ ಯುವಕನ ಶವ ದೊರೆತಿದೆ.

ಮೃತದೇಹದ ಜೊತೆಗಿದ್ದ ಐಡಿ ಕಾರ್ಡ್ನಿಂದ ಯುವಕನ ವಿಳಾಸ ಪತ್ತೆಯಾಗಿದ್ದು ಮೃತದೇಹವನ್ನು ನೋಡಿದ ಪೋಷಕರು ದಿವಾಕರ್ ನದ್ದು ಎಂದು ಗುರುತಿಸಿದ್ದಾರೆ.

ಇದಲ್ಲದೆ ಮಂಜುನಾಥ್ ಎಂಬುವವನು ದಿವಾಕರ್ ಶೆಟ್ಟಿ ಜೊತೆ ಕೊನೆಯದಾಗಿ ಮಾತನಾಡಿದ್ದು ಹಿಂದೆ 20 ಗ್ರಾಂ ಚಿನ್ನವನ್ನು ದಿವಾಕರ್ ಬಳಿ ಮಂಜುನಾಥ್ ಗಿರವಿ ಇಟ್ಟಿದ್ದ. ಹಣ ನೀಡದಿದ್ದಕ್ಕೆ ಮೃತ ದಿವಾಕರ್ ಶೆಟ್ಟಿ ಧಮ್ಕಿ ಹಾಕಿದ್ದಾರೆ. ಈ ಹಿನ್ನೆಲೆ ದಿವಾಕರ್ನ ಕತ್ತು ಹಿಸುಕಿ ಮಂಜುನಾಥ್ ಮತ್ತು ರಾಜು ಎಂಬುವವರು ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು ಇಬ್ಬರನ್ನು ವಶಕ್ಕೆ ತೆಗೆದುಕೊಂಡು ಪುಟ್ಟೇನಹಳ್ಳಿ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.



Join Whatsapp