ಗಣರಾಜ್ಯೋತ್ಸವ ಪರೇಡ್​ನಲ್ಲಿ ಗಮನಸೆಳೆದ ಕರ್ನಾಟಕದ ಸ್ತಬ್ಧಚಿತ್ರ

Prasthutha|

ಹೊಸದಿಲ್ಲಿ: ಗಣರಾಜ್ಯೋತ್ಸವ ಪರೇಡ್​ನಲ್ಲಿ ಕರ್ನಾಟಕದ ‘ಸಾಂಪ್ರದಾಯಿಕ ಕರಕುಶಲ ವಸ್ತುಗಳ ತೊಟ್ಟಿಲು’ ಸ್ತಬ್ಧಚಿತ್ರ ಗಮನಸೆಳೆಯಿತು.

- Advertisement -

 73ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ನವದೆಹಲಿಯ ರಾಜಪಥದಲ್ಲಿ ನಡೆದ ಪರೇಡ್​ನಲ್ಲಿ ಕರ್ನಾಟಕದಿಂದ ಜಾಗತಿಕ ಮಾನ್ಯತೆ ಗಳಿಸಿದ ವಸ್ತುಗಳ ಸ್ತಬ್ಧಚಿತ್ರದ ಜೊತೆ ಖ್ಯಾತ ಕಲಾವಿದೆ ಬೆಂಗಳೂರಿನ ಅದಿತಿ ಉರಾಳ್​ ಸೇರಿದಂತೆ 12 ಕಲಾವಿದರು ಹೆಜ್ಜೆ ಹಾಕಿದರು.

ಕಲಾವಿದ ಶಶಿಧರ ಅಡಪ ಅವರು ‘ಸಾಂಪ್ರದಾಯಿಕ ಕರಕುಶಲ ವಸ್ತುಗಳ ತೊಟ್ಟಿಲು’ ಎಂಬ ವಿಷಯದ ಕುರಿತು ಸ್ತಬ್ಧಚಿತ್ರ ರೂಪಿಸಿದ್ದಾರೆ.  



Join Whatsapp